ಬಂಟ್ವಾಳ, ಜುಲೈ 13, 2025 (ಕರಾವಳಿ ಟೈಮ್ಸ್) : ಗೂಡಂಗಡಿಯಲ್ಲಿ ಚಾ ಕುಡಿಯುತ್ತಿದ್ದ ವೇಳೆ ವ್ಯಕ್ತಿಯೊಬ್ಬರಿಗೆ ಮೂವರ ತಂಡವೊಂದು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ ಘಟನೆ ಬಿ ಮೂಡ ಗ್ರಾಮದ ತಲಪಾಡಿ ಎಂಬಲ್ಲಿ ಶನಿವಾರ ಸಂಜೆ ವೇಳೆ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಬಿ ಮೂಡ ಗ್ರಾಮದ ತಲಪಾಡಿ ನಿವಾಸಿ ಅಬ್ದುಲ್ ರಝಾಕ್ ಅವರ ಪುತ್ರ ಮೊಹಮ್ಮದ್ ಇಬ್ರಾಹಿಂ (26) ಎಂದು ಹೆಸರಿಸಲಾಗಿದ್ದು, ಆರೋಪಿಗಳನ್ನು ನೌಶೀರ್, ಮುಶರಫ್ ಹಾಗೂ ಅವರ ಜೊತೆಗಿದ್ದ ಇನ್ನೋರ್ವ ವ್ಯಕ್ತಿ ಎಂದು ಹೇಳಲಾಗಿದೆ.
ಹಲ್ಲೆಗೊಳಗಾದ ಮೊಹಮ್ಮದ್ ಇಬ್ರಾಹಿಂ ಅವರು ಈವೆಂಟ್ ಡೆಕೋರೇಟರ್ ಆಗಿ ಕೆಲಸ ಮಾಡಿಕೊಂಡಿದ್ದು ಶನಿವಾರ ತೊಕ್ಕೊಟ್ಟು ಎಂಬಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಸಂಜೆ 4.30 ರ ವೇಳೆಗೆ ಬಿ ಮೂಡ ಗ್ರಾಮದ ತಲಪಾಡಿ ಎಂಬಲ್ಲಿಗೆ ಗೆಳೆಯರಾದ ರಾಝಿಕ್, ಹನೀಫ್ ಹಾಗೂ ರಿಯಾಝ್ ಅವರೊಂದಿಗೆ ಅಟೋ ರಿಕ್ಷಾವೊಂದರಲ್ಲಿ ಸಂಜೆ ಸುಮಾರು 4.30ರ ವೇಳೆಗೆ ಬಂದು ಗೆಳೆಯರನ್ನು ಇಳಿಸಿ ಹೋಗಿರುತ್ತಾರೆ. ಬಳಿಕ ಇವರು ತಲಪಾಡಿಯಲ್ಲಿರುವ ಫಾರೂಕ್ ಎಂಬವರ ಗೂಡಂಗಡಿಗೆ ಚಾ ಕುಡಿಯಲು ತೆರಳಿ ಚಹಾ ಕುಡಿದು, ಜಗ್ ನಿಂದ ನೀರು ಕುಡಿಯುತ್ತಿರುವ ಸಂದರ್ಭ ಹಿಂದಿನಿಂದ ಬಂದ ನೌಶೀರ್ ಎಂಬಾತನು ಆತನ ಕೈಯಲ್ಲಿ ಕಲ್ಲನ್ನು ಹಿಡಿದು ಏಕಾಏಕಿ ಇಬ್ರಾಹಿಂ ಅವರ ತಲೆಯ ಹಿಂಭಾಗಕ್ಕೆ ಹೊಡೆದಿದ್ದು, ತಲೆಗೆ ಗಾಯವಾಗಿರುತ್ತದೆ. ಅದೇ ವೇಳೆ ಮುಶರಫ್ ಎಂಬಾತ ಅವಾಚ್ಯ ಶಬ್ದಗಳಿಂದ ಬೈದಿದಲ್ಲದೇ ಆತನ ಜೊತೆ ಇದ್ದ ಇನ್ನೊಬ್ಬ ವ್ಯಕ್ತಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾನೆ. ಈ ಸಂದರ್ಭ ಇಬ್ರಾಹಿಂ ನೋವಿನಿಂದ ಬೊಬ್ಬೆ ಹಾಕಿದನ್ನು ಕೇಳಿ ಗೂಡಂಗಡಿಗೆ ಚಹಾ ಕುಡಿಯಲು ಬಂದಿದ್ದವರು ಬರಲಾರಂಭಿಸಿದನ್ನು ನೋಡಿ ಆರೋಪಿಗಳು ತಾವು ಬಂದಿದ್ದ ಜುಪಿಟರ್ ಸ್ಕೂಟಿಯಲ್ಲಿ ಪರಾರಿಯಾಗಿರುತ್ತಾರೆ ಎಂದು ಇಬ್ರಾಹಿಂ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment