ಬಂಟ್ವಾಳ, ಜುಲೈ 07, 2025 (ಕರಾವಳಿ ಟೈಮ್ಸ್) : ಯಾವುದೇ ಕಲಿಕೆಗೆ ವಯಸ್ಸಿನ ಅಡ್ಡಿಯಿಲ್ಲ. ಯಾವ ವಯಸ್ಸಿನವರು ಕೂಡಾ ಯಾವುದೇ ತರಬೇತಿಯನ್ನು ಪಡೆಯಬಹುದು. ಚಿತ್ರಕಲೆಯೂ ಅಷ್ಟೇ, ಯಾವುದೇ ವಯಸ್ಸಿನವರು ತಮ್ಮ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಚಿತ್ರದ ಮುಖೇನ ವ್ಯಕ್ತಪಡಿಸಬಹುದು. ಹೆಚ್ಚು ಸಮಯ ಚಿತ್ರಕಲೆಯಲ್ಲಿ ತಲ್ಲೀನರಾದರೆ ಅವರಿಂದ ಮೂಡಿ ಬರಲಿರುವ ಚಿತ್ರವೂ ಅದ್ಭುತವಾಗಿರುತ್ತದೆ ಎಂದು ನಿವೃತ್ತ ಚಿತ್ರಕಲಾ ಶಿಕ್ಷಕ ಚೆನ್ನಕೇಶವ ಡಿ ಆರ್ ಹೇಳಿದರು.
ಬಿ ಸಿ ರೋಡಿನ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಡೆದ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ರಿ ಪೊಸಳ್ಳಿ ಇದರ ಆಶ್ರಯದಲ್ಲಿರುವ ಕುಲಾಲ ಸೇವಾದಳದ ವತಿಯಿಂದ ನಡೆದ ಚೈತನ್ಯ 4.0 ನಿರಂತರ ಶಿಕ್ಷಣದಲ್ಲಿ ಚಿತ್ರಕಲೆ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ದಳಪತಿ ಜಯಂತ ಕುಲಾಲ್ ಅಗ್ರಬೈಲು ಮಾತನಾಡಿ, ಕಳೆದ ಮೂರು ವರ್ಷಗಳಿಂದ ಕುಲಾಲ ಸೇವಾ ದಳದಿಂದ ಬಂಟ್ವಾಳದ ಕುಲಾಲ ಭವನದಲ್ಲಿ ಮಹೇಶ್ ಕುಲಾಲ್ ಕಡೇಶಿವಾಲಯ ಇವರಿಂದ ಡ್ಯಾನ್ಸ್, ಯೋಗ ಶಿಕ್ಷಕ ಕಿಶೋರ್ ಕೈಕುಂಜೆ ಇವರಿಂದ ಯೋಗ ತರಬೇತಿ, ಸೌಮ್ಯ ಸುಧಾಕರ್ ಇವರಿಂದ ಭಜನೆ ತರಬೇತಿಯನ್ನು ಉಚಿತವಾಗಿ ನೀಡುತ್ತಾ ಬಂದಿದ್ದು ಇದರ ಸದುಪಯೋಗಪಡಿಸಿಕೊಳ್ಳಬೇಕಾಗಿ ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಯಾದವ ಅಗ್ರಬೈಲು, ಕಾರ್ಯಕಾರಿ ಸಮಿತಿ ಸದಸ್ಯರಾದ ಗಣೇಶ್ ಕುಲಾಲ್ ಬೆದ್ರಗುಡ್ಡೆ, ದೇವದಾಸ ಅಗ್ರಬೈಲು, ತಾರನಾಥ ಮೊಡಂಕಾಪು, ರಾಘವೇಂದ್ರ ಕಾಮಾಜೆ, ಪ್ರೇಮನಾಥ ನೇರಂಬೋಳು, ಸೇವಾ ದಳದ ಕಾರ್ಯದರ್ಶಿ ರಾಜೇಶ್ ಭಂಡಾರಿಬೆಟ್ಟು, ಸೇವಾ ದಳದ ಸದಸ್ಯರುಗಳಾದ ಪುರುಷೋತ್ತಮ ಸೌತೆಬಳ್ಳಿ, ಕಿಶೋರ್ ಕೈಕುಂಜೆ, ಚಿರಾಗ್ ಕಾಮಾಜೆ, ಬಿಪಿನ್ ಕರಿಂಗಾಣ, ಶೇಖರ ಮಣಿಹಳ್ಳ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment