ಮಂಗಳೂರು, ಜುಲೈ 08, 2025 (ಕರಾವಳಿ ಟೈಮ್ಸ್) : ಡಿಪ್ಲೊಮಾ ಇಂಜಿನಿಯರಿಂಗ್ ಕೋರ್ಸ್ ಕಲಿಯುತ್ತಿದ್ದ ವಿದ್ಯಾರ್ಥಿಯೋರ್ವ ಹಠಾತ್ ಹೃದಯ ಸ್ಥಂಭನದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಸುರತ್ಕಲ್ ಸಮೀಪದ ಕೃಷ್ಣಾಪುರ ಹಿಲ್‍ಸೈಡ್ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಮೃತ ಯುವಕನನ್ನು ಸ್ಥಳೀಯ ನಿವಾಸಿ, ಅಟೋ ಚಾಲಕ ಅಸ್ಗರ್ ಅಲಿ ಎಂಬವರ ಏಕೈಕ ಪುತ್ರ ಅಫ್ತಾಬ್ (18) ಎಂದು ಹೆಸರಿಸಲಾಗಿದೆ. ಈತ ಸುರತ್ಕಲ್ಲಿನ ವಿದ್ಯಾ ಸಂಸ್ಥೆಯೊಂದರಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪೆÇ್ಲಮಾ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಫ್ತಾಬ್ ಮನೆಯಲ್ಲಿ ಸ್ನಾನಕ್ಕೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಸ್ಗರ್ ಅಲಿ ಅವರ ನಾಲ್ಕು ಮಕ್ಕಳಲ್ಲಿ ಅಫ್ತಾಬ್ ಏಕೈಕ ಪುತ್ರನಾಗಿದ್ದಾನೆ. ಮೂವರು ಪುತ್ರಿಯರಿಗೆ ವಿವಾಹವಾಗಿದ್ದು, ಪತ್ನಿ ಕೋವಿಡ್ ಸಂದರ್ಭ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಸದ್ಯ ಮನೆಯಲ್ಲಿ ಅಸ್ಗರ್ ಅಲಿ ಅವರು ಪುತ್ರನ ಜೊತೆ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಅಸ್ಗಲಿ ಅಲಿ ಮಧ್ಯಾಹ್ನದವರೆಗೂ ತಮ್ಮ ಮಗನೊಂದಿಗೆ ಮನೆಯಲ್ಲೇ ಇದ್ದರು. ಸುಮಾರು 1 ಗಂಟೆ ವೇಳೆಗಷ್ಟೆ ಅವರು ಕೆಲಸಕ್ಕೆ ಹೋಗಿದ್ದು, ಬಳಿಕ ಈ ಘಟನೆ ಸಂಭವಿಸಿದೆ ಎಂದು ಗೊತ್ತಾಗಿದೆ.
0 comments:
Post a Comment