ಬಂಟ್ವಾಳ, ಜುಲೈ 17, 2025 (ಕರಾವಳಿ ಟೈಮ್ಸ್) : ಕತ್ತಿ-ಕೋಲುಗಳೊಂದಿಗೆ ಮನೆಯಂಗಳಕ್ಕೆ ಅಕ್ರಮ ಪ್ರವೇಶಗೈದ ನಾಲ್ಕು ಮಂದಿಯ ತಂಡ ಅವಾಚ್ಯವಾಗಿ ಬೈದು ಜೀವಬೆದರಿಕೆ ಒಡ್ಡಿದ ಘಟನೆ ಕಡೇಶ್ವಾಲ್ಯ ಗ್ರಾಮದ ದೊಡ್ಡಾಜೆ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.
ಈ ಬಗ್ಗೆ ಇಲ್ಲಿನ ನಿವಾಸಿ ಚೇತನ ಡಿ (38) ಅವರು ಪೊಲೀಸರಿಗೆ ದೂರು ನೀಡಿದ್ದು, ಬುಧವಾರ ಸಂಜೆ ಸುಮಾರು 5.30 ರ ವೇಳೆಗೆ ಮನೆಯಂಗಳಕ್ಕೆ ಅಕ್ರಮ ಪ್ರವೇಶಗೈದ ಆರೋಪಿಗಳಾದ ಲಲಿತ ನಾಯ್ಕ, ಸುಶೀಲ, ವೆಂಕಪ್ಪ, ಲಕ್ಷ್ಮೀ ಅವರುಗಳು ಕತ್ತಿ, ಕೋಲುಗಳನ್ನು ಹಿಡಿದು ಚೇತನ ಅವರ ತಂದೆ ಮತ್ತು ತಾಯಿಗೆ ನಮ್ಮ ಮೇಲೆಯೇ ಬಂಟ್ವಾಳ ಠಾಣೆಯಲ್ಲಿ ದೂರನ್ನು ನೀಡಿರುತ್ತೀರಿ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು, ನಿಮ್ಮನ್ನು ಬದುಕಲು ಬಿಡುವುದಿಲ್ಲ ಎಂದು ಬಾಗಿಲಿಗೆ ಬಡಿದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ನೀಡಿರುವ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment