ದ.ಕ. ಜಿಲ್ಲಾ ನಿಯಂತ್ರಣ ಕೊಠಡಿಯ ಪೊಲೀಸ್ ನಿರೀಕ್ಷಕ ಪದ್ಮಯ್ಯ ರಾಣೆ ನಿವೃತ್ತಿ - Karavali Times ದ.ಕ. ಜಿಲ್ಲಾ ನಿಯಂತ್ರಣ ಕೊಠಡಿಯ ಪೊಲೀಸ್ ನಿರೀಕ್ಷಕ ಪದ್ಮಯ್ಯ ರಾಣೆ ನಿವೃತ್ತಿ - Karavali Times

728x90

31 July 2025

ದ.ಕ. ಜಿಲ್ಲಾ ನಿಯಂತ್ರಣ ಕೊಠಡಿಯ ಪೊಲೀಸ್ ನಿರೀಕ್ಷಕ ಪದ್ಮಯ್ಯ ರಾಣೆ ನಿವೃತ್ತಿ

ಮಂಗಳೂರು, ಜುಲೈ 31, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ನಿಯಂತ್ರಣ ಕೊಠಡಿಯ ಪೊಲೀಸ್ ನಿರೀಕ್ಷಕ ಪದ್ಮಯ ರಾಣೆ ಅವರು ಇಲಾಖೆಯಲ್ಲಿ 33 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಜುಲೈ 31 ರಂದು ವಯೋನಿವೃತ್ತಿ ಹೊಂದಿದರು. 

ಇವರು 1992ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ನಿಸ್ತಂತು ಸೇವೆಗೆ ಸೇರ್ಪಡೆಗೊಂಡು, 1992 ರಿಂದ 1997 ರವರೆಗೆ ಪೊಲೀಸ್ ರೇಡಿಯೋ ಸ್ಟೇಷನ್ ಶಿಕಾರಿಪುರದಲ್ಲಿ ವೈರ್ ಲೆಸ್ ಆಪರೇಟರ್ ಆಗಿ ಸೇವೆ ಸಲ್ಲಿಸಿ, ನಂತರ 1997 ರಿಂದ 2011ರವರೆಗೆ ಜಿಲ್ಲಾ ನಿಯಂತ್ರಣ ಕೊಠಡಿ ಶಿವಮೊಗ್ಗದಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2011 ರಿಂದ 2014ರ ವರೆಗೆ ಎ ಎನ್ ಎಫ್ ಕಾರ್ಕಳದಲ್ಲಿ ಕರ್ತವ್ಯ ನಿರ್ವಹಿಸಿ, 2014 ರಿಂದ 31-7-2025 ರವರೆಗೆ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರ ಸೇವಾವಧಿಯಲ್ಲಿ 2022ನೇ ಸಾಲಿನ ಮುಖ್ಯಮಂತ್ರಿಯವರ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ದ.ಕ. ಜಿಲ್ಲಾ ನಿಯಂತ್ರಣ ಕೊಠಡಿಯ ಪೊಲೀಸ್ ನಿರೀಕ್ಷಕ ಪದ್ಮಯ್ಯ ರಾಣೆ ನಿವೃತ್ತಿ Rating: 5 Reviewed By: karavali Times
Scroll to Top