ಬಂಟ್ವಾಳ, ಜುಲೈ 03, 2025 (ಕರಾವಳಿ ಟೈಮ್ಸ್) : ಬಿ ಮೂಡ ಗ್ರಾಮದ ಕೈಕುಂಜೆ ಎಂಬಲ್ಲಿನ ನೇತ್ರಾವತಿ ನದಿ ನೀರಿನಲ್ಲಿ ಮರಗಳ ಮಧ್ಯೆ ಬುಧವಾರ ಅಪರಿಚಿತ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಕೈಕುಂಜೆ ರೈಲ್ವೇ ಸ್ಟೇಶನ್ ಹತ್ತಿರದ ನಿವಾಸಿ ರವಿರಾವ್ ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ಬುಧವಾರ ಬೆಳಿಗ್ಗೆ 11 ಗಂಟೆಗೆ ಅಡಿಕೆ ತೋಟಕ್ಕೆ ಹೋದಾಗ ನೇತ್ರಾವತಿ ನದಿಯ ನೀರಿನಲ್ಲಿ ತೋಟದಿಂದ ಸುಮಾರು 45 ಅಡಿಗಳಷ್ಟು ದೂರದಲ್ಲಿ ಮರದ ಕೊಂಬೆಗಳ ಮಧ್ಯದಲ್ಲಿ ಯಾವುದೋ ವ್ಯಕ್ತಿಯ ದೇಹ ಸಿಲುಕಿಕೊಂಡು ಇದ್ದ ಹಾಗೆ ಕಂಡು ಬಂದಿದ್ದನ್ನು ನೋಡಿದಾಗ ಯಾರೋ ಅಪರಿಚಿತ ವ್ಯಕ್ತಿಯ ದೇಹವು ನೀರಿನಲ್ಲಿ ಮುಖ ಕವುಚಿ ಬಿದ್ದು ತೇಲಿಕೊಂಡಿರುವುದು ಖಚಿತಗೊಂಡಿದೆ. ತಕ್ಷಣ ಅವರು ಅಗ್ನಿಶಾಮಕದಳ ಸಿಬ್ಬಂದಿಯವರ ಸಹಾಯದಿಂದ ನೇತ್ರಾವತಿ ನದಿಯ ನೀರಿನಿಂದ ನದಿಯ ದಡದ ಸಮೀಪಕ್ಕೆ ತಂದು ನೋಡಿದಾಗ ಸುಮಾರು 45-50 ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ಮೃತದೇಹವಾಗಿದ್ದು, ಮೃತದೇಹವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು.
ಮೃತ ದೇಹದ ಮೇಲೆ ಪೂಮೆಕ್ಸ್ ಕಂಪೆನಿಯ ಕಾಫಿ ಬಣ್ಣದ ಒಳಚಡ್ಡಿ, ಸೊಂಟದಲ್ಲಿ ಕಪ್ಪು ಬಣ್ಣದ ಉಡುದಾರ ಮತ್ತು ಕುತ್ತಿಗೆಯಲ್ಲಿ ಕೆಂಪು ಬಣ್ಣದ ಮುಖ ಕವಚ ಇರುವುದು ಕಂಡುಬಂದಿದೆ. ಈ ಬಗ್ಗೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
0 comments:
Post a Comment