ಬಂಟ್ವಾಳ, ಜುಲೈ 15, 2025 (ಕರಾವಳಿ ಟೈಮ್ಸ್) : ಗೋಳ್ತಮಜಲು ಜೆಮ್ ಆಂಗ್ಲ ಮಾಧ್ಯಮ ಶಾಲೆಯ 2025-26ನೇ ಶೈಕ್ಷಣಿಕ ಸಾಲಿನ ಶಿಕ್ಷಕ-ರಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಗೋಳ್ತಮಜಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಫಾತಿಮಾ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಇದರ ಮ್ಯಾನೇಜಿಂಗ್ ಟ್ರಸ್ಟಿ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ.
ಉಪಾಧ್ಯಕ್ಷರಾಗಿ ಪುಷ್ಪಾ ಗೋಳ್ತಮಜಲು, ಕಾರ್ಯದರ್ಶಿಯಾಗಿ ಶಾಲಾ ಮುಖ್ಯ ಶಿಕ್ಷಕ ನಿರಂಜನ್ ಡಿ, ಸದಸ್ಯರಾಗಿ ಮನೀಶ ವೀರಕಂಭ, ಅಶ್ರಫ್ ಬಚ್ಚಿರೆಕೋಡಿ, ಸಿದ್ದೀಕ್ ಸರವು, ಗೀತಾ ದಾಸಕೋಡಿ, ಅಸ್ಮಾ ಕಲ್ಲಡ್ಕ, ಶಾಹಿದಾ ಬಾನು ಕಲ್ಲಡ್ಕ, ಜಮೀಲಾ ಕೆ ಸಿ ರೋಡು, ನಾಝಿಯ ನಾರ್ಶ, ಮುಮ್ತಾಝ್ ಕೆ ಸಿ ರೋಡು, ಹೇಮಲತಾ ಬೋಳಂತೂರು, ಹಮೀದ್ ಅಲಿ ಮಾಣಿಮಜಲು ಹಾಗೂ ಸವೂದು ವೀರಕಂಭ ಅವರನ್ನು ಆರಿಸಲಾಯಿತು.
0 comments:
Post a Comment