ಕಡೇಶ್ವಾಲ್ಯ : ಮಹಿಳೆ ನೆಟ್ಟಿದ್ದ ಗಿಡಗಳನ್ನು ನಾಪಡಿಸಿದ ಐದು ಮಂದಿಯ ತಂಡ - Karavali Times ಕಡೇಶ್ವಾಲ್ಯ : ಮಹಿಳೆ ನೆಟ್ಟಿದ್ದ ಗಿಡಗಳನ್ನು ನಾಪಡಿಸಿದ ಐದು ಮಂದಿಯ ತಂಡ - Karavali Times

728x90

15 July 2025

ಕಡೇಶ್ವಾಲ್ಯ : ಮಹಿಳೆ ನೆಟ್ಟಿದ್ದ ಗಿಡಗಳನ್ನು ನಾಪಡಿಸಿದ ಐದು ಮಂದಿಯ ತಂಡ

ಬಂಟ್ವಾಳ, ಜುಲೈ 15, 2025 (ಕರಾವಳಿ ಟೈಮ್ಸ್) : ಮಹಿಳೆಯೋರ್ವರು ತನ್ನ ಜಾಗದಲ್ಲಿ ನೆಟ್ಟಿದ್ದ ಬಾಳೆ ಹಾಗೂ ಅಡಿಕೆ ಗಿಡಗಳನ್ನು 5 ಮಂದಿಯ ತಂಡ ನಾಶಪಡಿಸಿದ ಘಟನೆ ಕಡೇಶ್ವಾಲ್ಯ ಗ್ರಾಮದ ದೊಡ್ಡಾಜೆ ಎಂಬಲ್ಲಿ ಸೋಮವಾರ ಬೆಳಿಗ್ಗೆ ನಡೆದಿದ್ದು ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇಲ್ಲಿನ ನಿವಾಸಿ ಲಲಿತಾ ಅವರ ಜಾಗದಲ್ಲಿ ಈ ಘಟನೆ ನಡೆದಿದೆ. ಲಲಿತಾ ಅವರ ಜಾಗದ ಪಕ್ಕದಲ್ಲಿ ಚೇತನ್ ಡಿ ಎಂಬವರಿಗೆ ಬಾಬು ಎಂಬವರ ಹೆಸರಿನಲ್ಲಿ ಜಮೀನಿದ್ದು, ಸೋಮವಾರ ಬೆಳಿಗ್ಗೆ ಚೇತನ ಡಿ ಮತ್ತು ಅವರ ತಾಯಿ ವಾರಿಜ ಹಾಗೂ ಇತರ 3 ಜನರು ಲಲಿತಾ ಅವರ ಜಾಗಕ್ಕೆ ಬಂದು ಲಲಿತಾ ಅವರು ನೆಟ್ಟಿದ್ದ 15 ಬಾಳೆ ಗಿಡಗಳು, 4 ಅಡಿಕೆ ಗಿಡಗಳನ್ನು ಕಡಿದು ನಾಶಪಡಿಸಿದ್ದಾರೆ. ಇದರಿಂದ ಲಲಿತಾ ಅವರಿಗೆ ಸುಮಾರು 3 ಸಾವಿರ ರೂಪಾಯಿ ನಷ್ಟವಾಗಿದೆ. ಅಲ್ಲದೆ ಲಲಿತಾ ಅವರು ಹೋಗಿ ಬರುವ ದಾರಿಯಲ್ಲಿ ಹೋಗದಂತೆ ಆರೋಪಿಗಳು ತಡೆಯೊಡ್ಡಿದ್ದಲ್ಲದೆ ಜೀವಸಹಿತ ಬಿಡುವುದಿಲ್ಲ ಎಂಧು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಲಲಿತಾ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕಡೇಶ್ವಾಲ್ಯ : ಮಹಿಳೆ ನೆಟ್ಟಿದ್ದ ಗಿಡಗಳನ್ನು ನಾಪಡಿಸಿದ ಐದು ಮಂದಿಯ ತಂಡ Rating: 5 Reviewed By: karavali Times
Scroll to Top