ಬಂಟ್ವಾಳ, ಜುಲೈ 27, 2025 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಭಾನುವಾರವೂ ಸುಂಟರಗಾಳಿ ಮಳೆ ಮುಂದುವರಿದಿದ್ದು, ಮತ್ತೆ ಹಲವು ಮನೆ ತೋಟಗಳಿಗೆ ಹಾನಿ ಸಂಭವಿಸಿದೆ. ಬಹುತೇಕ ಮನೆಗಳ ಮೇಲೆ ಮರಗಳು ಉರುಳಿ ಬಿದ್ದ ಘಟನೆ ನಡೆದಿದೆ.
ಬಂಟ್ವಾಳ ಕಸಬಾ ಗ್ರಾಮದ ಮುಗ್ಡಲ್ ಗುಡ್ಡೆ ನಿವಾಸಿ ಸಂಜೀವ ಸಪಲ್ಯ ಬಿನ್ ಕೊರಗ ಸಪಲ್ಯ ಅವರ ಮನೆಗೆ ಮರ ಬಿದ್ದು ಹಾನಿ ಸಂಭವಿಸಿದೆ. ಅಮ್ಮುಂಜೆ ಗ್ರಾಮದ ನಿವಾಸಿ ದೇವಕಿ ಕೋಂ ಶ್ರೀಧರ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ನಾವೂರು ಗ್ರಾಮದ ಕೊಂಪೆ ನಿವಾಸಿ ವಸಂತ ಬಿನ್ ಮುಂಡಪ್ಪ ಪೂಜಾರಿ ಅವರ ಕೊಟ್ಟಿಗೆಗೆ ಮರ ಬಿದ್ದು ಹಾನಿ ಸಂಭವಿಸಿದೆ. ಅಮ್ಮುಂಜೆ ಗ್ರಾಮದ ಕಲಾಯಿ ನಿವಾಸಿ ದೇವದಾಸ ಬೆಳ್ಚಡ ಬಿನ್ ಬಾಬು ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಬಿ ಮೂಡ ಗ್ರಾಮದ ಪಲ್ಲಮಜಲು ನಿವಾಸಿ ಕಮಲ ಕೋಂ ಕೃಷ್ಣಪ್ಪ ಪೂಜಾರಿ ಅವರ ವಾಸ್ತವ್ಯದ ಮನೆಗೆ ಮರ ಬಿದ್ದು ಹಾನಿಯಾಗಿದೆ. ಶಂಭೂರು ಗ್ರಾಮದ ನರ್ಸರಕೋಡಿ ನಿವಾಸಿ ಬಾಬು ಸಪಲ್ಯ ಅವರ ವಾಸ್ತವ್ಯದ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.
ಅಮ್ಟಾಡಿ ಗ್ರಾಮದ ದೇವಿನಗರ ನಿವಾಸಿ ಲೋಕಯ ಮೂಲ್ಯ ಅವರ ವಾಸ್ತವ್ಯದ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಕಳ್ಳಿಗೆ ಗ್ರಾಮದ ನಿವಾಸಿ ಪುರುಷೋತ್ತಮ ಅವರ ಮನೆಗೆ ಮರ ಬಿದ್ದು ತೀವ್ರ ಹಾನಿಯಾಗಿದೆ. ಮಂಚಿ ಗ್ರಾಮದ ನಿವಾಸಿ ಯಮುನಾ ಕೋಂ ನಾರಾಯಣ ಮೂಲ್ಯ ಅವರ ವಾಸ್ತವ್ಯದ ಮನೆ ಮೇಲೆ ಅಡಿಕೆ ಗಿಡ ಬಿದ್ದು ಭಾಗಶಃ ಹಾನಿ ಸಂಭವಿಸಿದೆ. ಕೇಪು ಗ್ರಾಮದ ಚಿಮಿನಡ್ಕ ನಿವಾಸಿ ಮಹಮ್ಮದ್ ಬಿನ್ ಇಬ್ರಾಹಿಂ ಅವರ ಮನೆಗೆ ಅಡಿಕೆ ಮರ ಬಿದ್ದು ಹಾನಿಯಾಗಿರುತ್ತದೆ. ಮಂಚಿ ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ಕೃಷಿ ನಾಶ ಸಂಭವಿಸಿದೆ.
0 comments:
Post a Comment