ಸರಪಾಡಿ : ಮನೆಗೆ ಬೀಗ ಹಾಕಿ ಹೋಗಿದ್ದ ವೇಳೆ ನುಗ್ಗಿ ನಗದು ಕಳವುಗೈದ ಖದೀಮರು - Karavali Times ಸರಪಾಡಿ : ಮನೆಗೆ ಬೀಗ ಹಾಕಿ ಹೋಗಿದ್ದ ವೇಳೆ ನುಗ್ಗಿ ನಗದು ಕಳವುಗೈದ ಖದೀಮರು - Karavali Times

728x90

26 July 2025

ಸರಪಾಡಿ : ಮನೆಗೆ ಬೀಗ ಹಾಕಿ ಹೋಗಿದ್ದ ವೇಳೆ ನುಗ್ಗಿ ನಗದು ಕಳವುಗೈದ ಖದೀಮರು

ಬಂಟ್ವಾಳ, ಜುಲೈ 26, 2025 (ಕರಾವಳಿ ಟೈಮ್ಸ್) : ಬಾಡಿಗೆ ಮನೆಗೆ ಮನೆ ಮಂದಿ ಬೀಗ ಹಾಕಿ ತೆರಳಿದ್ದ ವೇಳೆ ಒಳನುಗ್ಗಿದ ಕಳ್ಳರು ಸಾವಿರಾರು ರೂಪಾಯಿ ನಗದು ಕಳವುಗೈದ ಘಟನೆ ಸರಪಾಡಿ ಗ್ರಾಮದ ದರ್ಖಾಸು ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ಸಂಜೆ ಬಂದಿದೆ.

ಇಲ್ಲಿನ £ವಾಸಿ ಅಜಿತ್ (29) ಅವರು  ಜುಲೈ 24 ರಂದು ರಾತ್ರಿ 11:30 ಗಂಟೆಗೆ ತಾನು  ವಾಸಿಸುವ ಬಾಡಿಗೆ ಮನೆಯ ಮುಂಭಾಗದ ಬಾಗಿಲಿಗೆ ಬೀಗ ಹಾಕಿ ಭದ್ರ ಪಡಿಸಿ  ಸರಪಾಡಿಯಲ್ಲಿರುವ ತನ್ನದೇ ಸ್ವಂತ ಮನೆಗೆ ಹೋಗಿದ್ದರು. ಮರುದಿನ ಸಂಜೆ ಸುಮಾರು 7 ಗಂಟೆಗೆ ವಾಪಾಸು ಬಾಡಿಗೆ ಮನೆಗೆ ಬಂದಾಗ, ಮನೆಯ ಬಾಗಿಲಿಗೆ ಹಾಕಿದ ಬೀಗ ಇರಲಿಲ್ಲ, ಬಾಗಿಲು ತೆರೆದು ಒಳಗೆ ಹೋಗಿ ನೋಡಿದಾಗ ಮನೆಯ ಹಾಲ್ ನಲ್ಲಿ ನಾಲ್ಕು ಖಾಲಿ ಬಿಯರ್ ಬಾಟಲ್ ಇದ್ದು , ಮಲಗುವ ಕೋಣೆಗೆ ಹೋಗಿ ನೋಡಿದಾಗ ಮಲಗುವ ಕೊಠಡಿಯಲ್ಲಿದ್ದ  ಗೊಡ್ರೇಜ್ ಕಪಾಟಿನ ಬಾಗಿಲು ತೆರೆದಿತ್ತು. ಗೊಡ್ರೇಜ್ ಕಪಾಟಿನಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ನೆಲದಲ್ಲಿ ಬಿದ್ದಿತ್ತು. ಕಪಾಟಿನ ಒಳಗಡೆ  ಇರುವ  ಬೀಗ ಮುರಿದಿದ್ದು ಅದರಲ್ಲಿದ್ದ 18,500/- ರೂಪಾಯಿ ನಗದು ಹಣ ಕಳವಾಗಿರುವುದು ಬೆಳಕಿಗೆ ಬಂದಿದೆ.  ಈ ಬಗ್ಗೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸರಪಾಡಿ : ಮನೆಗೆ ಬೀಗ ಹಾಕಿ ಹೋಗಿದ್ದ ವೇಳೆ ನುಗ್ಗಿ ನಗದು ಕಳವುಗೈದ ಖದೀಮರು Rating: 5 Reviewed By: karavali Times
Scroll to Top