ದಂಡ ಶುಲ್ಕದೊಂದಿಗೆ ಪ್ರಥಮ ಪಿಯುಸಿ ದಾಖಲಾತಿ ದಿನಾಂಕ ವಿಸ್ತರಿಸಿದ ಪದವಿಪೂರ್ವ ಶಿಕ್ಷಣ ಇಲಾಖೆ : ಜುಲೈ 31 ಕೊನೆ ದಿನಾಂಕ - Karavali Times ದಂಡ ಶುಲ್ಕದೊಂದಿಗೆ ಪ್ರಥಮ ಪಿಯುಸಿ ದಾಖಲಾತಿ ದಿನಾಂಕ ವಿಸ್ತರಿಸಿದ ಪದವಿಪೂರ್ವ ಶಿಕ್ಷಣ ಇಲಾಖೆ : ಜುಲೈ 31 ಕೊನೆ ದಿನಾಂಕ - Karavali Times

728x90

25 July 2025

ದಂಡ ಶುಲ್ಕದೊಂದಿಗೆ ಪ್ರಥಮ ಪಿಯುಸಿ ದಾಖಲಾತಿ ದಿನಾಂಕ ವಿಸ್ತರಿಸಿದ ಪದವಿಪೂರ್ವ ಶಿಕ್ಷಣ ಇಲಾಖೆ : ಜುಲೈ 31 ಕೊನೆ ದಿನಾಂಕ

ಬೆಂಗಳೂರು, ಜುಲೈ 25, 2025 (ಕರಾವಳಿ ಟೈಮ್ಸ್) : ಪದವಿಪೂರ್ವ ಶಿಕ್ಷಣ ಇಲಾಖೆಯು ಪ್ರಥಮ ಪಿಯುಸಿ ದಾಖಲಾತಿ ದಿನಾಂಕವನ್ನು ದಂಡ ಶುಲ್ಕ ಮತ್ತು ವಿಶೇಷ ದಂಡ ಶುಲ್ಕದೊಂದಿಗೆ ಜುಲೈ 31ರವರೆಗೆ ವಿಸ್ತರಣೆ  ಮಾಡಿ ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳು ದಂಡ ಶುಲ್ಕ 670/- ರೂಪಾಯಿ + ವಿಶೇಷ ದಂಡ ಶುಲ್ಕ 2,220/- ರೂಪಾಯಿ ಸಹಿತ ಒಟ್ಟು 2,890/- ರೂಪಾಯಿ ಪಾವತಿ ಮಾಡಿ ದಾಖಲಾಗಬಹುದು. 

ಎಸ್ಸೆಸ್ಸೆಲ್ಸಿ ಪರೀಕ್ಷೆ-3 ರ ಫಲಿತಾಂಶ ಜುಲೈ 23 ರಂದಷ್ಟೆ ಪ್ರಕಟಗೊಂಡಿರುವ ಹಿನ್ನಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ದಾಖಲಾತಿ ದಿನಾಂಕ ವಿಸ್ತರಿಸಿದೆ. ಪರೀಕ್ಷೆ-3ಕ್ಕೆ ಹಾಜರಾದ 2,093,74 ವಿದ್ಯಾರ್ಥಿಗಳ ಪೈಕಿ 42,085 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಒಟ್ಟಾರೆ 8,68,385 ವಿದ್ಯಾರ್ಥಿಗಳ ಪೈಕಿ 6,45,273 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.  

  • Blogger Comments
  • Facebook Comments

0 comments:

Post a Comment

Item Reviewed: ದಂಡ ಶುಲ್ಕದೊಂದಿಗೆ ಪ್ರಥಮ ಪಿಯುಸಿ ದಾಖಲಾತಿ ದಿನಾಂಕ ವಿಸ್ತರಿಸಿದ ಪದವಿಪೂರ್ವ ಶಿಕ್ಷಣ ಇಲಾಖೆ : ಜುಲೈ 31 ಕೊನೆ ದಿನಾಂಕ Rating: 5 Reviewed By: karavali Times
Scroll to Top