ಬೆಳ್ತಂಗಡಿ, ಜುಲೈ 10, 2025 (ಕರಾವಳಿ ಟೈಮ್ಸ್) : ಮನೆಯ ಸಮೀಪದ ತೋಟದ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮರಳನ್ನು ಅಕ್ರಮವಾಗಿ ಸಂಗ್ರಹಿಸಿದ ಪ್ರಕರಣವನ್ನು ವೇಣೂರು ಪೊಲೀಸರು ಬುಧವಾರ ಬೇಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ವೇಣೂರು ಪೊಲೀಸ್ ಠಾಣಾ ಎಚ್ ಸಿ ಕೃಷ್ಣ ಬಿ ಕೆ ಅವರ ನೇತೃತ್ವದ ಪೊಲೀಸರು ದಾಳಿ ನಡೆಸಿದ್ದು, ಬೆಳ್ತಂಗಡಿ ತಾಲೂಕು, ಆರಂಬೋಡಿ ಗ್ರಾಮದ ಕಾಂತರಬೆಟ್ಟು ನಿವಾಸಿ ಸುಕೀತ ಎಂಬಾತ ತನ್ನ ಮನೆಯ ಸಮೀಪದ ತೋಟದ ಜಮೀನಿನ ಬಳಿ ಹರಿಯುತ್ತಿರುವ ಫಲ್ಗುಣಿ ನದಿಯಿಂದ ಸುಮಾರು 3-4 ತಿಂಗಳ ಹಿಂದೆ ಅಕ್ರಮ ಮರಳುಗಾರಿಕೆ ನಡೆಸಿ ಸುಮಾರು 1.70 ಲಕ್ಷ ರೂಪಾಯಿ ಮೌಲ್ಯದ 150-170 ಟನ್ ಮರಳನ್ನು ತೋಟದಲ್ಲಿ ದಾಸ್ತಾನಿಟ್ಟಿರುವುದು ಪತ್ತೆಯಾಗಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರನ ದಾಖಲಾಗಿದೆ.
0 comments:
Post a Comment