ಕಾವಳಕಟ್ಟೆ : ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಚಾಲಕಿ ಸಹಿತ ಮೂವರಿಗೆ ಗಾಯ - Karavali Times ಕಾವಳಕಟ್ಟೆ : ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಚಾಲಕಿ ಸಹಿತ ಮೂವರಿಗೆ ಗಾಯ - Karavali Times

728x90

5 July 2025

ಕಾವಳಕಟ್ಟೆ : ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಚಾಲಕಿ ಸಹಿತ ಮೂವರಿಗೆ ಗಾಯ

ಬಂಟ್ವಾಳ, ಜುಲೈ 05, 2025 (ಕರಾವಳಿ ಟೈಮ್ಸ್) : ನಿಲ್ಲಿಸಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದು ಇಬ್ಬರು ಮಹಿಳೆ ಸಹಿತ ಮೂವರು ಗಾಯಗೊಂಡ ಘಟನೆ ಕಾವಳಮೂಡೂರು ಗ್ರಾಮದ ಕಾವಳಕಟ್ಟೆ ಜಂಕ್ಷನ್ನಿನಲ್ಲಿ ಶುಕ್ರವಾರ ಸಂಭವಿಸಿದೆ. 

ಕಾವಳಕಟ್ಟೆ ನಿವಾಸಿ ಝಾಕೀರ್ ಹುಸೇನ್ (42) ಅವರು ಶುಕ್ರವಾರ ಬೆಳಿಗ್ಗೆ ತನ್ನ ಲಾರಿಯನ್ನು ತನ್ನ ಮನೆಯಿಂದ ಬಂಗೇರಕೆರೆ-ಕಾವಳಕಟ್ಟೆ ರಸ್ತೆಯಲ್ಲಿ ಚಲಾಯಿಸುತ್ತಾ ಕಾವಳಕಟ್ಟೆ ಜಂಕ್ಷನ್ನಿಗೆ ತಲುಪಿ, ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿ ಬಳಿ ರಸ್ತೆಯ ಎಡ ಬದಿಯಲ್ಲಿ ಲಾರಿಯನ್ನು ಮಂಗಳೂರು ಕಡೆಗೆ ತಿರುಗಿಸುವರೇ ನಿಲ್ಲಿಸಿದ್ದ ವೇಳೆ ಬೆಳಿಗ್ಗೆ 5 ಗಂಟೆ ಸುಮಾರಿಗೆ ಮಡಂತ್ಯಾರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರಿನ ಚಾಲಕಿಯು ಲಾರಿಯನ್ನು ಗಮನಿಸಿಯೂ ಕಾರನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ ತೀರ ಬಲ ಬದಿಗೆ ಬಂದು ನಿಲ್ಲಿಸಿದ್ದ ಲಾರಿಯ ಎಡ ಭಾಗಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

ಅಪಘಾತದಿಂದ ಕಾರಿನ ಚಾಲಕಿ, ಹಿಂಬದಿಯಲ್ಲಿದ್ದ ಓರ್ವ ಮಹಿಳೆ ಹಾಗೂ ಗಂಡಸಿಗೆ ಗಾಯಗಳಾಗಿದ್ದು, ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತದಿಂದ ಲಾರಿ ಹಾಗೂ ಕಾರಿ ಎರಡೂ ವಾಹನಗಳು ಜಖಂಗೊಂಡಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕಾವಳಕಟ್ಟೆ : ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಚಾಲಕಿ ಸಹಿತ ಮೂವರಿಗೆ ಗಾಯ Rating: 5 Reviewed By: karavali Times
Scroll to Top