ಮಂಗಳೂರು, ಜುಲೈ 06, 2025 (ಕರಾವಳಿ ಟೈಮ್ಸ್) : ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ.ರೋಡ್ ಶಾಖೆಯ ದರೋಡೆ ಪ್ರಕರಣದಲ್ಲಿ ದರೋಡೆಕೋರರಿಂದ ವಶಪಡಿಸಿಕೊಂಡ 13.5 ಕೋಟಿ ರೂಪಾಯಿ ಮೌಲ್ಯದ ಸುಮಾರು 18 ಕೆಜಿ 360.302 ಗ್ರಾಂ ಚಿನ್ನಾಭರಣ ಹಾಗೂ ನಗದು (ಮೌಲ್ಯ 13 ಕೋಟಿ 50 ಲಕ್ಷ) ಗಳನ್ನು ನ್ಯಾಯಾಲಯದ ಆದೇಶದಂತೆ ಶಾಖಾ ಮ್ಯಾನೇಜರ್ ಅವರಿಗೆ ಪೆÇಲೀಸ್ ಅಧಿಕಾರಿಗಳು ಶನಿವಾರ ಹಸ್ತಾಂತರಿಸಿದ್ದಾರೆ.
ಕಳೆದ ಜನವರಿ 17 ರಂದು ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ ಸಿ ರೋಡು ಶಾಖೆಗೆ ಹಾಡಹಗಲೇ ನುಗ್ಗಿದ ಡಕಾಯಿತರ ತಂಡ ಬ್ಯಾಂಕ್ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೆ ರಿವಾಲ್ವರ್ ತೋರಿಸಿ ಚಿನ್ನಾಭರಣ ಮತ್ತು ನಗದನ್ನು ದೋಚಿ ಪರಾರಿಯಾಗಿತ್ತು. ಬಳಿಕ ದರೋಡೆಕೋರರು ತಮಿಳುನಾಡಿನ ತಿರುನಲ್ವೇಲಿಗೆ ಪರಾರಿಯಾಗಿದ್ದರು.
ಘಟನೆ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಶ್ರೀಮತಿ ವಾಣಿ ಅಲ್ ಅವರು ನೀಡಿದ ದೂರಿನಂತೆ ಕಾರ್ಯಪ್ರವೃತ್ತರಾದ ಮಂಗಳೂರು ಪೊಲೀಸರ ತಂಡ ದರೋಡೆ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ, ಆರೋಪಿಗಳಾದ ತಮಿಳುನಾಡು ಮೂಲದ ಮುರುಗಂಡಿ ತೇವರ್ ಅಲಿಯಾಸ್ ಕುಮಾರ್, ಯೋಸ್ವಾ ರಾಜೇಂದ್ರನ್ ಅಲಿಯಾಸ್ ಜೋಶ್ವ ರಾಜೇಂದ್ರನ್ ಅಲಿಯಾಸ್ ಜೇಶ್ವ ರಾಜೇಂದ್ರನ್, ಕಣ್ಣನ್ ಮಣಿ, ಎಂ ಷಣ್ಮುಗ ಸುಂದರಂ ಹಾಗೂ ಸ್ಥಳೀಯ ನಿವಾಸಿಗಳಾದ ಶಶಿ ತೇವರ್ ಅಲಿಯಾಸ್ ಭಾಸ್ಕರ ಬೆಳ್ಚಪ್ಪಾಡ, ಕೆ ಮೊಹಮ್ಮದ್ ನಝೀರ್ ಅಲಿಯಾಸ್ ನಝೀರ್ ಎಂಬವರನ್ನು ದಸ್ತಗಿರಿ ಮಾಡಿ ದರೋಡೆಯಾದ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಇದೀಗ ನ್ಯಾಯಾಲಯದ ನಿರ್ದೇಶನದಂತೆ, ವಶಪಡಿಸಿಕೊಂಡ ಚಿನ್ನಾಭರಣವನ್ನು ಅಪ್ರೈಸ್ ಅವರಿಂದ ಪರಿಶೀಲನೆ ಹಾಗೂ ತೂಕ ಮಾಡಿ, ವೀಡಿಯೋಗ್ರಫಿ ಮತ್ತು ಫೋಟೋಗ್ರಫಿ ಮಾಡಿ ಬ್ಯಾಂಕ್ ಅಪ್ರೈಸರ್ ಅವರ ಸಮ್ಮುಖದಲ್ಲಿ ತೂಕ ಮಾಡಿ ಪಂಚಾಯತುದಾರರಾದ ದಿವ್ಯರಾಜ್ ಮತ್ತು ವಿಕಾಸ್ ಅವರ ಉಪಸ್ಥಿತಿಯಲ್ಲಿ ಬ್ಯಾಂಕ್ ಮೆನೇಜರ್ ಹಾಗೂ ಜಿಪಿಎ ದಾರರಾದ ಶ್ರೀಮತಿ ವಾಣಿ ಆಳ್ವ ಅವರಿಗೆ ಪೆÇಲೀಸರು ಹಸ್ತಾಂತರಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
0 comments:
Post a Comment