ಧರ್ಮಸ್ಥಳ, ಜುಲೈ 05, 2025 (ಕರಾವಳಿ ಟೈಮ್ಸ್) : ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಬಗ್ಗೆ, ವ್ಯಕ್ತಿಯೊಬ್ಬ ಮಾಹಿತಿ ನೀಡಲು ಸಿದ್ದವಿರುವುದಾಗಿ ತಿಳಿಸಿ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದ ಪ್ರಸಾರವಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸದ್ರಿ ವ್ಯಕ್ತಿಯ ಪರವಾಗಿ ವಕೀಲರ ತಂಡ ಜಿಲ್ಲಾ ಪೆÇಲೀಸರ ಕಛೇರಿಗೆ ಭೇಟಿ ನೀಡಿದ ವೇಳೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು ಭೇಟಿಗೆ ಲಭ್ಯವಿರದ ಬಗ್ಗೆ, ಆರೋಪಿತ ಸುದರ್ಶನ ಬೆಳಾಲು ಎಂಬಾತ “ಹೊಸ ಕನ್ನಡ” ಎಂಬ ವೆಬ್ ನ್ಯೂಸ್ ಚಾನೆಲ್ಲಿನಲ್ಲಿ ಉದ್ದೇಶ ಪೂರ್ವಕವಾಗಿ ಸಾರ್ವಜನಿಕರಿಗೆ ಭೀತಿಯನ್ನು ಹುಟ್ಟಿಸುವಂತೆ, ಸುಳ್ಳು ಮಾಹಿತಿಯನ್ನು ವರದಿ ಮಾಡಿರುವುದಾಗಿದೆ.
ಈ ವರದಿಯ ಬಗ್ಗೆ ಆರೋಪಿತನನ್ನು ಧರ್ಮಸ್ಥಳ ಪೆÇಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿ, ವಕೀಲರ ತಂಡ ಪೆÇಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಲು ಪೂರ್ವಾನುಮತಿ ಪಡೆದಿದ್ದಾರೆಯೇ ಎಂಬ ಬಗ್ಗೆ ಹಾಗೂ ವಕೀಲರ ತಂಡ ಬಂದಾಗ ಪೆÇಲೀಸ್ ವರಿಷ್ಠಾಧಿಕಾರಿಗಳು ಲಭ್ಯರಿಲ್ಲದಿರಲು ಕಾರಣವೇನು ಎಂಬ ಯಾವುದೇ ಮಾಹಿತಿಗಳನ್ನು ಪರಿಶೀಲಿಸದೇ, ಯಾವುದೇ ಸೂಕ್ತ ಸಾಕ್ಷಿ/ ಪುರಾವೆಗಳು ಇಲ್ಲದೇ ಸುಳ್ಳು ಮಾಹಿತಿಯನ್ನು ವರದಿ ಮಾಡಿರುವುದು ದೃಢಪಟ್ಟಿರುತ್ತದೆ. ಸದ್ರಿ ಆರೋಪಿತ ಸುದರ್ಶನ ಬೆಳಾಲು ಎಂಬಾತನ ವಿರುದ್ದ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 40/2025 ಕಲಂ 352, 353(1)ಬಿ ಬಿಎನ್‍ಎಸ್ ಪ್ರಕಾರ ಪ್ರಕರಣ ದಾಖಲಾಗಿದೆ.
0 comments:
Post a Comment