ಬಂಟ್ವಾಳ, ಜುಲೈ 08, 2025 (ಕರಾವಳಿ ಟೈಮ್ಸ್) : ಶನಿವಾರ ಪುತ್ತೂರಿನಲ್ಲಿ ಅಪ್ರಾಪ್ತ ಬಾಲಕ-ಬಾಲಕಿಯರ ಮೇಲೆ ಅನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿದ ಇಬ್ಬರು ಬಂಧನಕ್ಕೊಳಗಾದ ಘಟನೆ ಮಾಸುವ ಮುನ್ನವೇ ಮಂಗಳವಾರ ಸಂಜೆ ವಿಟ್ಲದಲ್ಲೂ ಅಂತಹದೇ ಗೂಂಡಾಗಿರಿ ಪ್ರಕರಣ ವರದಿಯಾಗಿದೆ.
ಮಂಗಳವಾರ (ಜುಲೈ 8) ಸಂಜೆ ಅಪ್ರಾಪ್ತ ಬಾಲಕ ವಿಟ್ಲ ಖಾಸಗಿ ಬಸ್ ನಿಲ್ದಾಣದಲ್ಲಿ ತನ್ನ ಶಾಲಾ ಸಹಪಾಠಿಯೊಂದಿಗೆ ಮಾತನಾಡುತ್ತಿರುವಾಗ ಆರೋಪಿ ಮಂಜೇಶ್ವರ ಎನ್ಮಕಜೆ ನಿವಾಸಿ ಪದ್ಮರಾಜ್ ಎಂಬಾತ ಸ್ಥಳಕ್ಕೆ ಬಂದು, ಹಿಂದೂ ಹುಡುಗಿಯೊಂದಿಗೆ ಮಾತನಾಡುತ್ತಿರುವ ಬಗ್ಗೆ ತಕರಾರು ತೆಗೆದು, ಜೀವ ಬೆದರಿಕೆ ಒಡ್ಡಿ ಹೋಗಿರುತ್ತಾನೆ.
ಈ ಬಗ್ಗೆ ಬಾಲಕನ ಸಹೋದರ ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 83/2025, ಕಲಂ 126(2), 352, 351(3),196(1)(a) ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಸದ್ರಿ ಪ್ರಕರಣದ ಸಂತ್ರಸ್ಥರು ಅಪ್ರಾಪ್ತರಾಗಿರುವುದರಿಂದ ಪ್ರಕರಣದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಯಾವುದೇ ಮಾಧ್ಯಮಗಳು ಪ್ರಸಾರ ಮಾಡುವಾಗ ಬಾಲ ನ್ಯಾಯ ಕಾಯ್ದೆ ಹಾಗೂ ಬಾಲ ನ್ಯಾಯ ನಿಯಮಾವಳಿಗಳನ್ನು ಪಾಲಿಸುವಂತೆ ಇದೇ ವೇಳೆ ಪೊಲೀಸರು ಸೂಚಿಸಿದ್ದಾರೆ.
0 comments:
Post a Comment