ಮಂಗಳೂರು, ಜುಲೈ 09, 2025 (ಕರಾವಳಿ ಟೈಮ್ಸ್) : ಜುಲೈ 2 ರಂದು ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ಮುಂದುವರಿಸಿದ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮಧ್ಯಪ್ರದೇಶ ರಾಜ್ಯದ ಬರ್ವಾನಿ ಜಿಲ್ಲೆಯ, ಮೋಹನ್ ಪಡವಾ ಗ್ರಾಮದ ನಿವಾಸಿ ಕಲಿಯಾ ಎಂಬವರ ಮಗ ಮಾಯಾರಾಮ್ (32), ಮಹಾರಾಷ್ಟ್ರ ರಾಜ್ಯದ ಜಲಂಗಾವ್ ಜಿಲ್ಲೆಯ ಚೋಪ್ಡಾ ನಿವಾಸಿ ರಾಮ ಪವಾರ ಎಂಬವರ ಪುತ್ರ ಪ್ರೇಮಸಿಂಗ್ ರಾಮ ಪವಾರ (48) ಹಾಗೂ ಅದೇ ಗ್ರಾಮದ ನಿವಾಸಿ ಪ್ರಕಾಶ ನಾರಾಯಣ ಎಂಬವರ ಮಗ ಅನಿಲ್ ಪ್ರಕಾಶ್ ಕೋಲಿ (35) ಎಂದು ಹೆಸರಿಸಲಾಗಿದೆ. ಮೂವರ ಬಂಧನದ ಮೂಲಕ ಬಂಧಿತರ ಸಂಖ್ಯೆ 8ಕ್ಕೇರಿದಂತಾಗಿದೆ.
ಸದ್ರಿ ಪ್ರಕರಣದಲ್ಲಿ ಮಾದಕ ವಸ್ತು ಸೇವನೆ ಮಾಡುವವರಿಂದ ತನಿಖೆ ಆರಂಭಿಸಿದ ಪೊಲೀಸರು ಹಂತ ಹಂತವಾಗಿ ಮಾದಕ ವಸ್ತಗಳನ್ನು ಮಂಗಳೂರು ನಗರಕ್ಕೆ ಪೂರೈಕೆ ಮಾಡುವ 6 ಜನರನ್ನು ಪತ್ತೆ ಮಾಡಿ ಈಗಾಗಲೇ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮಂಗಳೂರು-ಬಿಕರ್ನಕಟ್ಟೆ ಸಮೀಪದ ಅಡು ಮರೋಳಿ ನಿವಾಸಿ ರಾಜೇಶ್ ತಾರನಾಥ್ ಅವರ ಪುತ್ರ ತುಷಾರ್ ಅಲಿಯಾಸ್ ಸೋನು (21), ನಾಗುರಿ ನಿವಾಸಿ ಬಾಲಕೃಷ್ಣ ಶೆಟ್ಟಿ ಅವರ ಪುತ್ರ ಧನ್ವಿ ಶೆಟ್ಟಿ (20), ಜಲ್ಲಿಗುಡ್ಡೆ ನಿವಾಸಿ ಶೀತಲ್ ಕುಮಾರ್ ಅವರ ಪುತ್ರ ಸಾಗರ್ ಕರ್ಕೇರಾ (19), ಶಕ್ತಿನಗರ ನಿವಾಸಿ ರಾಜು ಥಾಪ ಅವರ ಪುತ್ರ ವಿಕಾಸ್ ಥಾಪ ಅಲಿಯಾಸ್ ಪುಚ್ಚಿ (23), ಅಳಕೆ-ಕಂಡೆಟ್ಟು ನಿವಾಸಿ ದಿವಂಗತ ಹರೀಶ್ ಕಾಮತ್ ಅವರ ಪುತ್ರ ವಿಘ್ನೇಶ್ ಕಾಮತ್ (24) ಹಾಗೂ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ನಿವಾಸಿ ದಿವಾಕರ ಶೆಟ್ಟಿ ಅವರ ಪುತ್ರ ಧ್ರುವ್ ಡಿ ಶೆಟ್ಟಿ (22) ಎಂಬವರನ್ನು ಈಗಾಗಲೇ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಪ್ರಕರಣ ತನಿಖೆಯ ವೇಳೆ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯದಿಂದ ಮಾದಕ ವಸ್ತು ಸರಬರಾಜು ಆಗುತ್ತಿರುವ ಮಾಹಿತಿ ತಿಳಿದುಬಂದಿದ್ದು, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಕ್ಕೆ ವಿಶೇಷ ತಂಡವನ್ನು ಕಳುಹಿಸಿ 3 ಜನ ಆರೋಪಿತರನ್ನು ದಸ್ತಗಿರಿ ಮಾಡಿ ಬುಧವಾರ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದು, ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಬಂಧಿತರದಿಂಧ ಕೃತ್ಯಕ್ಕೆ ಬಳಸಿದ 3 ಮೊಬೈಲ್ ಫೆÇೀನ್ ಗಳು ಹಾಗೂ 1,78,920/- ರೂಪಾಯಿ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಇನ್ನೂ ತನಿಖೆ ಮುಂದುವರಿಸಿರುವ ಪೊಲೀಸರು ಇನ್ನುಳಿದ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂಧು ತಿಳಿಸಿದ್ದಾರೆ. ಸದ್ರಿ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯದಲ್ಲಿ ಸೆನ್ ಕ್ರೈಂ ಪೆÇಲೀಸ್ ಠಾಣಾ ಮತ್ತು ಮಂಗಳೂರು ನಗರದ ವಿಶೇಷ ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದಾರೆ.
0 comments:
Post a Comment