ಮಂಗಳೂರು, ಜುಲೈ 05, 2025 (ಕರಾವಳಿ ಟೈಮ್ಸ್) : ಸಹಪಾಠಿ ಯುವತಿಯನ್ನೇ ಬಳಸಿಕೊಂಡು ಅತ್ಯಾಚಾರ ನಡೆಸಿದ್ದಲ್ಲದೆ ಆಕೆಯನ್ನು ಗರ್ಭವತಿ ಮಾಡಿ ಆಕೆ ಮಗು ಹೆತ್ತ ಬಳಿಕ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿ ಶ್ರೀಕೃಷ್ಣ ಜೆ ರಾವ್ (21) ಎಂಬಾತನನ್ನು ಕೊನೆಗೂ ಮಹಿಳಾ ಠಾಣಾ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಜೂನ್ 24 ರಂದು ಈತನ ವಿರುದ್ದ ಯುವತಿ ದಕ್ಷಿಣ ಕನ್ನಡ ಮಹಿಳಾ ಪೆÇಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 49/2025, ಕಲಂ 64(1), 69 ಬಿ ಎನ್ ಎಸ್-2023ರಂತೆ ಪ್ರಕರಣ ದಾಖಲಾಗಿತ್ತು. ಎಫ್ ಐ ಆರ್ ದಾಖಲಾಗುತ್ತಿದ್ದಂತೆ ಆರೋಪಿ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದ. ಘಟನೆಯು ಆರೋಪಿ ಬಿಜೆಪಿ ಹಾಗೂ ಹಿಂದೂ ಸಂಘಟನೆ ಮುಖಂಡನ ಪುತ್ರನಾಗಿದ್ದರಿಂದ ಪುತ್ತೂರು ಸಹಿತ ಜಿಲ್ಲೆ ಹಾಗೂ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಈ ಬಗ್ಗೆ ಕಾಂಗ್ರೆಸ್ ಮುಖಂಡರ ಸಹಿತ ಹಲವು ಮಹಿಳಾ ಸಂಘಟನೆಗಳ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಆರೋಪಿಯ ತಕ್ಷಣ ಬಂಧನಕ್ಕೆ ಆಗ್ರಹಿಸಿದ್ದರು.
ಕಳೆದ 10 ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಶ್ರೀ ಕೃಷ್ಣ ಜೆ ರಾವ್ (21) ಎಂಬಾತನ ಅಡಗುತಾಣ ಪತ್ತೆ ಹಚ್ಚಿದ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪೆÇಲೀಸ್ ಠಾಣಾ ಪೆÇಲೀಸರು ಶುಕ್ರವಾರ (ಜುಲೈ 4) ರಾತ್ರಿ ಮೈಸೂರಿನ ಟಿ ನರಸೀಪುರ ಎಂಬಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ. ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಎಸ್ಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
0 comments:
Post a Comment