ಬಂಟ್ವಾಳ, ಜುಲೈ 18, 2025 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಮಳೆ ಹಾನಿ ಪ್ರಕರಣಗಳೂ ಮುಂದುವರಿದಿದೆ. ಗೋಳ್ತಮಜಲು ಗ್ರಾಮದ ಅಂಗನತ್ತಾಯ ದೈವಸ್ಥಾನದ ಬದಿ ತಡೆಗೋಡೆ ಕುಸಿದಿದೆ. ಬಡಗಬೆಳ್ಳೂರು ಗ್ರಾಮದ ನಿವಾಸಿ ಸೀತಾ ಅವರ ಮನೆಗೆ ಹಾನಿಯಾಗಿದೆ. ಕಡೇಶ್ವಾಲ್ಯ ಗ್ರಾಮದ ನಿವಾಸಿ ಕುಶಾಲಪ್ಪ ನಾಯ್ಕ ಬಿನ್ ವೆಂಕಪ್ಪ ನಾಯ್ಕ ಅವರ ವಾಸ್ತವ್ಯದ ಮನೆ ಮೇಲೆ ಬರೆ ಜರಿದು ಭಾಗಶಃ ಹಾನಿ ಸಂಭವಿಸಿದೆ. ರಾಯಿ ಗ್ರಾಮದ ಹೊರಂಗಳ ನಿವಾಸಿ ಲೀಲಾ ಕೋಂ ವಿಶ್ವನಾಥ ಕುಲಾಲ ಅವರ ಮನೆಗೆ ತಡರಾತ್ರಿ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಕೊಯಿಲ ಗ್ರಾಮದ ಕೊಯಿಲಾ ಕ್ವಾಟ್ರಸ್ ನಿವಾಸಿ ಹರೀಶ್ ಬಿನ್ ನೋಣಯ್ಯ ಪೂಜಾರಿ ಅವರ ಮನೆಯ ಹಿಂಬದಿಗೆ ಭಾಗಶಃ ಹಾನಿಯಾಗಿದೆ. ಗೋಳ್ತಮಜಲು ಗ್ರಾಮದ ಅಬ್ದುಲ್ ಖಾದರ್ ಬಿನ್ ಇಬ್ರಾಹಿಂ ಅವರ ಮನೆ ಬದಿ ತಡೆಗೋಡೆ ಬಿದ್ದು ಮನೆಗೆ ಹಾನಿ ಸಂಭವಿಸಿದೆ.
18 July 2025
- Blogger Comments
- Facebook Comments
Subscribe to:
Post Comments (Atom)
0 comments:
Post a Comment