ಬಂಟ್ವಾಳ, ಜುಲೈ 18, 2025 (ಕರಾವಳಿ ಟೈಮ್ಸ್) : ಓವರ್ ಟೇಕ್ ಭರದಲ್ಲಿ ಬುಲೆಟ್ ಬೈಕೊಂದು ಲಾರಿ ಹಾಗೂ ಈಚರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಾಣಿ ಗ್ರಾಮದ ಹಳೀರ ಎಂಬಲ್ಲಿ ಬುಧವಾರ ಸಂಜೆ ಸಂಭವಿಸಿದೆ.
ಗಾಯಗೊಂಡ ಬುಲೆಟ್ ಸವಾರನನ್ನು ತೇಜಸ್ವಿ ಎಂದು ಹೆಸರಿಸಲಾಗಿದೆ. ಈತ ಶವಪ್ರಸಾದ್ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಈಚರ್ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ಮೀರಿ ನವೀನ್ ಸುರೇಶ್ ನಾಯ್ಕ್ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿಯ ಚಕ್ರಕ್ಕೆ ಡಿಕ್ಕಿ ಹೊಡೆದು ಬಳಿಕ ಜಾರಿಕೊಂಡು ಹೋಗಿ ಈಚರ್ ವಾಹನಕ್ಕೂ ಅಪಘಾತಪಡಿಸಿದೆ. ಅಪಘಾತದಿಂದ ಬುಲೆಟ್ ಸವಾರ ತೇಜಸ್ವಿ ಅವರ ಕಾಲು ಹಾಗೂ ದೇಹದ ಇತರ ಭಾಗಗಳಿಗೆ ಗಾಯಗಳಾಗಿದ್ದು, ಅವರನ್ನು ಉಪ್ಪಿನಂಗಡಿ ಸೂರ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment