ಬಂಟ್ವಾಳ, ಜುಲೈ 23, 2025 (ಕರಾವಳಿ ಟೈಮ್ಸ್) : ಬೈಕೊಂದು ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರರಿಬ್ಬರು ಗಾಯಗೊಂಡ ಘಟನೆ ಕೇಪು ಗ್ರಾಮದ ಕುದ್ದುಪದವು ಎಂಬಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಗಾಯಗೊಂಡ ಸ್ಕೂಟರ್ ಸವಾರರನ್ನು ವಿಟ್ಲಪಡ್ನೂರು ಗ್ರಾಮದ ನಿವಾಸಿಗಳಾದ ಈಶ್ವರ ನಾಯ್ಕ ಹಾಗೂ ಧನಂಜಯ ಎಂದು ಹೆಸರಿಸಲಾಗಿದೆ. ಇವರು ಸ್ಕೂಟರಿನಲ್ಲಿ ಕೇಪು ಕಡೆಯಿಂದ ಅಡ್ಯನಡ್ಕ ಕಡೆಗೆ ತೆರಳುತ್ತಿದ್ದ ವೇಳೆ ಕುದ್ದುಪದವು ಎಂಬಲ್ಲಿ ಆತ್ಮಿಕ್ ಶೆಟ್ಟಿ ಎಂಬವರು ಚಲಾಯಿಸಿಕೊಂಡು ಬಂದ ಬೈಕ್ ಸ್ಕೂಟರ್ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಸ್ಕೂಟರ್ ಸವಾರ ಈಶ್ವರ ನಾಯ್ಕ್ ಹಾಗೂ ಧನಂಜಯ ಅವರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment