ಬಂಟ್ವಾಳ, ಜುಲೈ 15, 2025 (ಕರಾವಳಿ ಟೈಮ್ಸ್) : ಬಾಲ್ಯದಿಂದಲೇ ಮಕ್ಕಳಿಗೆ ವೇದಿಕೆ ಹತ್ತಲು ಅವಕಾಶ ಸಿಗುವುದು ಕೃಷ್ಣ ವೇಷದ ಮೂಲಕ. ಇಂತಹ ಅವಕಾಶವನ್ನು ಬಿ ಸಿ ರೋಡಿನ ಪೆÇಸಳ್ಳಿಯ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳವು ಕೃಷ್ಣ ಕೃಷ್ಣ ಶ್ರೀ ಕೃಷ್ಣಾ ಎಂಬ ಶಿರೋನಾಮೆಯಡಿ ಕಳೆದೆರಡು ವರ್ಷಗಳಿಂದ ನಡೆಸುತ್ತಾ ಬರುತ್ತಿರುವ ಕಾರ್ಯಕ್ರಮದಲ್ಲಿ ಒದಗಿಸಿಕೊಂಡು ಬಂದಿದ್ದು, ಈ ಬಾರಿಯ ಸೀಸನ್-3 ಕಾರ್ಯಕ್ರಮ ಆಗಸ್ಟ್ 24 ರಂದು ಬಿ ಸಿ ರೋಡಿನ ಕುಲಾಲ ಸಮುದಾಯ ಭವನದಲ್ಲಿ ನಡೆಲಿದೆ ಎಂದು ಸಂಘದ ಅಧ್ಯಕ್ಷ ರಮೇಶ್ ಸಾಲ್ಯಾನ್ ಸಂಚಯಗಿರಿ ಹೇಳಿದರು.
ಬಿ ಸಿ ರೋಡಿನ ಕುಲಾಲ ಸಮುದಾಯ ಭವನದಲ್ಲಿ ನಡೆದ ಕೃಷ್ಣ ಕೃಷ್ಣ ಶ್ರೀ ಕೃಷ್ಣಾ ಸೀಸನ್-3 ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸೇವಾದಳಪತಿ ಜಯಂತ್ ಕುಲಾಲ್ ಅಗ್ರಬೈಲು ಮಾತನಾಡಿ, ಕೃಷ್ಣ ವೇಷ ಸ್ಪರ್ಧೆಯ ಜೊತೆ ತಾಲೂಕಿನ ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಫಿಟ್ಟರ್, ವೆಲ್ಡರ್, ಮೆಶಿನಿಸ್ಟ್, ಅಟೋಮೊಬೈಲ್ ವರ್ಕರ್, ಡೀಸೆಲ್ ಮೆಕ್ಯಾನಿಕ್, ಎಸಿ ಟೆಕ್ನಿಶಿಯನ್, ಮೆಶಿನ್ ಆಪರೇಟರ್ಸ್, ಮೊಬೈಲ್ ಟೆಕ್ನಿಶಿಯನ್, ಅಟೋ ಎಲೆಕ್ಟ್ರಿಶಿಯನ್, ದ್ವಿಚಕ್ರ, ತ್ರಿಚಕ್ರ, ಘನ ವಾಹನಗಳ ಎಲ್ಲಾ ವಿಭಾಗದ ಟೆಕ್ನಿಶಿಯನ್ ಗಳನ್ನು ಗುರುತಿಸಿ ‘ನಮ್ಮೂರ ಟೆಕ್ನೀಶಿಯನ್’ ಎಂಬ ಶೀರ್ಷಿಕೆಯಲ್ಲಿ ಗೌರವಿಸಲಾಗುವುದು ಎಂದರು.
ಪ್ರಧಾನ ಕಾರ್ಯದರ್ಶಿ ಯಾದವ ಅಗ್ರಬೈಲು, ಕೋಶಾಧಿಕಾರಿ ಸೋಮನಾಥ ಸಾಲ್ಯಾನ್, ಮಹಿಳಾ ಘಟಕದ ಅಧ್ಯಕ್ಷೆ ಆಶಾ ಗಿರಿಧರ್, ಉಪಾಧ್ಯಕ್ಷೆ ಜಲಜಾಕ್ಷಿ ಕುಲಾಲ್ ಪಾಣೆಮಂಗಳೂರು, ಜತೆ ಕಾರ್ಯದರ್ಶಿ ಮೀನಾಕ್ಷಿ ಪದ್ಮನಾಭ, ಸತೀಶ್ ಸಂಪಾಜೆ ಮೊದಲಾದರು ಭಾಗವಹಿಸಿದ್ದರು.
0 comments:
Post a Comment