ಬಂಟ್ವಾಳ, ಜುಲೈ 28, 2025 (ಕರಾವಳಿ ಟೈಮ್ಸ್) : ಕಾರು ಚಾಲಕನೋರ್ವ ಯಾವುದೆ ಸೂಚನೆ ನೀಡದೆ ಏಕಾಏಕಿ ಹೆದ್ದಾರಿಯ ಡಿವೈಡರ್ ತೆರೆದ ಸ್ಥಳದಲ್ಲಿ ಸರ್ವಿಸ್ ರಸ್ತೆಗೆ ನುಗ್ಗಿಸಿದ ಪರಿಣಾಮ ಬೈಕಿಗೆ ಡಿಕ್ಕಿ ಹೊಡೆದು ಸವಾರ ಗಾಯಗೊಂಡ ಘಟನೆ ಬಿ ಮೂಡ ಗ್ರಾಮದ ತಲಪಾಡಿ ಎಂಬಲ್ಲಿ ಜುಲೈ 25 ರಂದು ಸಂಭವಿಸಿದ್ದು, ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಗೊಂಡ ಬೈಕ್ ಸವಾರನನ್ನು ಪಾಣೆಮಂಗಳೂರು ಸಮೀಪದ ಬೋಳಂಗಡಿ ನಿವಾಸಿ ಮೊಹಮ್ಮದ್ ಅಫ್ರೀಜ್ ಎಂದು ಹೆಸರಿಸಲಾಗಿದೆ. ಇವರು ತಮ್ಮ ಬೈಕಿನಲ್ಲಿ ಮಂಗಳೂರಿನಿಂದ ಮನೆಗೆ ಬರುತ್ತಿದ್ದ ವೇಳೆ ಬಿ ಮೂಡ ಗ್ರಾಮದ ತಲಪಾಡಿ ಎಂಬಲ್ಲಿನ ಹೆದ್ದಾರಿಯಲ್ಲಿ ಬಿ ಸಿ ರೋಡು ಕಡೆಯಿಂದ ಮಂಗಳೂರು ಕಡೆಗೆ ಮುಹಮ್ಮದ್ ಫಾಹಿಮ್ ಎಂಬವರು ಚಲಾಯಿಸುತ್ತಿದ್ದ ಕಾರನ್ನು ಯಾವುದೇ ಸೂಚನೆ ನೀಡದೇ ಡಿವೈಡರ್ ತೆರೆದ ಸ್ಥಳದಲ್ಲಿ ಒಮ್ಮೆಲೆ ಬಲಕ್ಕೆ ಸರ್ವಿಸ್ ರಸ್ತೆಗೆ ಹೋಗುವರೇ ಚಲಾಯಿಸಿಕೊಂಡು ಬಂದ ಪರಿಣಾಮ ಬೈಕಿನ ಎದುರು ಭಾಗದ ಎಡಬದಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಘಟನೆಯಿಂದ ಬೈಕ್ ಸವಾರ ಅಫ್ರೀಜ್ ಅವರ ಕೈ-ಕಾಲುಗಳಿಗೆ ಗಾಯಗಳಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment