ಬಂಟ್ವಾಳ, ಜುಲೈ 19, 2025 (ಕರಾವಳಿ ಟೈಮ್ಸ್) : ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ಆಡಳಿತ ಮಂಡಳಿ ಎಂಬ ನಾಲ್ಕು ಮುಖ್ಯ ಆಧಾರ ಸ್ಥಂಭಗಳಿವೆ. ಅವುಗಳು ಅನ್ಯೋನ್ಯವಾಗಿ ಸಂವಹನ ನಡೆಸಿದಾಗ ಅಂತಹ ಸಂಸ್ಥೆಯ ವಿದ್ಯಾರ್ಥಿಗಳು ಭವಿಷ್ಯದ ಸಮಾಜದ ಅತ್ಯುತ್ತಮ ನಾಗರಿಕರಾಗುತ್ತಾರೆ. ವಿದ್ಯಾರ್ಥಿಗಳು ಕೇವಲ ಅಂಕಗಳನ್ನು ಪಡೆಯುವುದನ್ನು ಉದ್ದೇಶವಾಗಿರಿಸದೆ, ಕ್ರೀಡೆ ಸಹಿತ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡರೆ ಭವಿಷ್ಯ ಬೆಳಗಿಸಬಹುದು ಎಂದು ತುಂಬೆ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ಸಲಾಂ ಅಭಿಪ್ರಾಯಪಟ್ಟರು.
ತುಂಬೆ ವಿದ್ಯಾ ಸಂಸ್ಥೆಗಳ ರಕ್ಷಕ-ಶಿಕ್ಷಕ ಸಂಘದ ಮಾಹಾ ಸಭೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತುಂಬೆ ಪಿಟಿಎಯ ದತ್ತಿ ನಿಧಿ ಸ್ಕಾಲರ್ ಶಿಪ್ ವಿತರಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಪಿಟಿಎ ನಿಕಟಪೂರ್ವಾಧ್ಯಕ್ಷ ಪ್ರಕಾಶ್ ಚಂದ್ರ ರೈ ದೇವಸ್ಯ, ಹಾಲಿ ಅಧ್ಯಕ್ಷ ನಿಸಾರ್ ಅಹಮದ್ ವಳವೂರು, ಉಪಾಧ್ಯಕ್ಷೆ ಮೋಹಿನಿ ಎಂ ಸುವರ್ಣ, ಕಾರ್ಯಕಾರಿ ಸಮಿತಿ ಪದಾಧಿಕಾರಿಗಳಾದ ಮ್ಯಾಕ್ಸಿಂ ಕುವೆಲ್ಲೋ, ಚಂಚಲಾಕ್ಷಿ, ಕಾಲೇಜು ಪ್ರಾಂಶುಪಾಲ ವಿ ಸು ಭಟ್, ಮ್ಯಾನೇಜರ್ ಬಿ ಅಬ್ದುಲ್ ಕಬೀರ್ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಕಳೆದ ಶೈಕ್ಷಣಿಕ ಸಾಲಿನಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ಹಾಗೂ ಕ್ರೀಡಾ ಸಾಧಕ ವಿದ್ಯಾರ್ಥಿಗಳಾದ ದಕ್ಷಿಣ ಎಸ್ ಸಾಲಿಯಾನ್, ಲಹರಿ ಜಿ ಕೆ, ಬಿ ಬಿ ಅಶೂರ, ಅಶ್ವಿನಿ, ಮೆಹರುನ್ನೀಸಾ, ಝೈಬಾ ಸುಲ್ತಾನ, ನಮ್ರತಾ, ಮುಹಮ್ಮದ್ ಶಾಝಿನ್ ಜಿ, ಮುಹಮ್ಮದ್ ಸಿನಾನ್, ಅರ್ಶಿಯಾ ಅಶ್ರಫ್, ಮೊಹಮ್ಮದ್ ಹಸನ್ ಮೆಹರಾನ್, ವಾಸುಕಿ ಅಭಯ ಶರ್ಮ, ಭವಿಷ್, ಶಾಹಿಲ್ ಸಹಲಾ, ಮಹಮ್ಮದ್ ನಶಾಂತ್ ಹಾಗೂ ನೌರೀನಾ ಅವರಿಗೆ ಪಿ ಟಿ ಎ ಎಂಡೋಮೆಂಟ್ ಸ್ಕಾಲರ್ ಶಿಪ್ ವಿತರಿಸಲಾಯಿತು.
ಆಡಳಿತಾಧಿಕಾರಿ ಕಿಶೋರ್ ಸುವರ್ಣ ಸಾಧಕ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾ ಕೆ ಸ್ವಾಗತಿಸಿ, ಆಂಗ್ಲ ಭಾಷಾ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಮಲ್ಲಿಕಾ ಶೆಟ್ಟಿ ವಂದಿಸಿದರು. ಹಿರಿಯ ಶಿಕ್ಷಕಿ ವಿಮಲಾ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment