ಮಂಗಳೂರು, ಜುಲೈ 19, 2025 (ಕರಾವಳಿ ಟೈಮ್ಸ್) : ಬಹುಕೋಟಿ ವಂಚನೆ ಆರೋಪದಲ್ಲಿ ಗುರುವಾರ ರಾತ್ರಿ ಯಶಸ್ವೀ ಕಾರ್ಯಾಚರಣೆಯಲ್ಲಿ ಮಂಗಳೂರು ಸೆನ್ ಪೊಲೀಸರಿಂದ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ವಂಚಕ ಬಜಾಲ್-ಬೊಲ್ಲಗುಡ್ಡ ನಿವಾಸಿ ರೋಶನ್ ಸಲ್ಡಾನ ವಿರುದ್ದ ಮಹಾರಾಷ್ಟ್ರ ಹಾಗೂ ಅಸ್ಸಾಂ ರಾಜ್ಯದ ಉದ್ಯಮಿಗಳು ತಮಗೂ ಕೋಟ್ಯಂತರ ಹಾಗೂ ಲಕ್ಷಾಂತರ ರೂಪಾಯಿ ವಂಚಿಸಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಜುಲೈ 18 ರಂದು ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಗೆ ಹಾಜರಾದ ಮಹಾರಾಷ್ಟ್ರ ಹಾಗೂ ಅಸ್ಸಾಂ ರಾಜ್ಯದ ಉದ್ಯಮಿಗಳು ಕ್ರಮವಾಗಿ 5 ಕೋಟಿ ರೂಪಾಯಿ ಹಾಗೂ 20 ಲಕ್ಷ ರೂಪಾಯಿ ಹಣವನ್ನು ಜುಲೈ 16 ಹಾಗೂ 17 ರಂದು ಬ್ಯಾಂಕ್ ಮೂಲಕ ವರ್ಗಾಯಿಸಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಬ್ಯಾಂಕುಗಳಿಗೆ ಸಂಪರ್ಕಿಸಿದ ಮಂಗಳೂರು ಸೆನ್ ಪೊಲೀಸರು ಮಹಾರಾಷ್ಟ್ರದ ಉದ್ಯಮಿಗೆ ಸಂಬಂಧಿಸಿದ 3.5 ಕೋಟಿ ರೂಪಾಯಿ ಹಣ ಹಾಗೂ ಅಸ್ಸಾಂ ರಾಜ್ಯದ ವ್ಯಕ್ತಿಗೆ ಸಂಬಂಧಿಸಿದ 20 ಲಕ್ಷ ರೂಪಾಯಿ ಹಣವನ್ನು ಪ್ರೀಜ್ ಮಾಡಿರುತ್ತಾರೆ.
ಪ್ರಕರಣಗಳಲ್ಲಿ ತನಿಖೆ ಮುಂದುವರೆಸಿರುವ ಪೊಲೀಸರು ಆರೋಪಿ ರೋಶನ್ ಸಲ್ದಾನನನ್ನು ಸೋಮವಾರ ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯದಲ್ಲಿ ಕೋರಿಕೆ ಸಲ್ಲಿಸಿ ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
0 comments:
Post a Comment