ಬಂಟ್ವಾಳ, ಜುಲೈ 21, 2025 (ಕರಾವಳಿ ಟೈಮ್ಸ್) : ಅಮಲು ಪದಾರ್ಥ ಸೇವನೆಯಿಂದ ವೃದ್ದರೋರ್ವರು ಮೃತಪಟ್ಟ ಘಟನೆ ಪುಣಚ ಗ್ರಾಮದ ಮಲ್ಲಿಪ್ಪಾಡಿ ಎಂಬಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ಮೃತರನ್ನ ಸುಂದರ ನಾಯ್ಕ (75) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಅವರ ಪುತ್ರ ಸತೀಶ್ ನಾಯ್ಕ ಅವರು ಪೊಲೀಸರಿಗೆ ದೂರು ನೀಡಿದ್ದು, ವಿಪರೀತ ಅಮಲು ಪದಾರ್ಥ ಸೇವನೆ ಮಾಡುವ ಚಟವನ್ನು ಹೊಂದಿದ್ದ ತಂದೆ ಜುಲೈ 18 ರಂದು ಅಮಲು ಪದಾರ್ಥ ಸೇವಿಸಿ ಮಲಗಿಕೊಂಡಿದ್ದವರು ಮರುದಿನ ಕರೆದರೂ ಏಳದೇ ಇದ್ದು ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಬಳಿಕ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆ ಆಸ್ಪತ್ರೆಗೆ ದಾಖಲಿಸಲಾಗಿ ಬಳಿಕ ಅಲ್ಲಿ ಉಳಕೊಂಡು ಆರೈಕೆ ಮಾಡಲು ಕಷ್ಟ ಎಂದು ಅಲ್ಲಿಂದ ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಜುಲೈ 20 ರಂದು ಮಧ್ಯಾಹ್ನ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
0 comments:
Post a Comment