ಯುಜಿಸಿಇಟಿ/ ನೀಟ್ : ಅಣುಕು ಸೀಟು ಫಲಿತಾಂಶ ಪ್ರಕಟ : ಆಪ್ಷನ್ ಎಂಟ್ರಿ ತಿದ್ದುಪಡಿಗೆ ಜುಲೈ 26 ರಿಂದ 29ರವರೆಗೆ ಅವಕಾಶ, ಆಗಸ್ಟ್ 2 ರಂದು ಅಂತಿಮ ಫಲಿತಾಂಶ ಪ್ರಕಟ - Karavali Times ಯುಜಿಸಿಇಟಿ/ ನೀಟ್ : ಅಣುಕು ಸೀಟು ಫಲಿತಾಂಶ ಪ್ರಕಟ : ಆಪ್ಷನ್ ಎಂಟ್ರಿ ತಿದ್ದುಪಡಿಗೆ ಜುಲೈ 26 ರಿಂದ 29ರವರೆಗೆ ಅವಕಾಶ, ಆಗಸ್ಟ್ 2 ರಂದು ಅಂತಿಮ ಫಲಿತಾಂಶ ಪ್ರಕಟ - Karavali Times

728x90

25 July 2025

ಯುಜಿಸಿಇಟಿ/ ನೀಟ್ : ಅಣುಕು ಸೀಟು ಫಲಿತಾಂಶ ಪ್ರಕಟ : ಆಪ್ಷನ್ ಎಂಟ್ರಿ ತಿದ್ದುಪಡಿಗೆ ಜುಲೈ 26 ರಿಂದ 29ರವರೆಗೆ ಅವಕಾಶ, ಆಗಸ್ಟ್ 2 ರಂದು ಅಂತಿಮ ಫಲಿತಾಂಶ ಪ್ರಕಟ

ಬೆಂಗಳೂರು, ಜುಲೈ 25, 2025 (ಕರಾವಳಿ ಟೈಮ್ಸ್) : ವೈದ್ಯಕೀಯ, ಎಂಜಿನಿಯರಿಂಗ್ ಸಹಿತ ಇತರ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಣಕು ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜುಲೈ 25 ರ ಶುಕ್ರವಾರ ಕೆಇಎ ವೆಬ್ ಸೈಟಿನಲ್ಲಿ ಪ್ರಕಟಿಸಿದೆ.

ಅಭ್ಯರ್ಥಿಗಳು ಕೆಇಎ ವೆಬ್‍ಸೈಟ್‍ನಲ್ಲಿ ನೀಡಲಾಗಿರುವ ಲಿಂಕ್ ಬಳಸಿ ಅಣುಕು ಫಲಿತಾಂಶ ತಿಳಿದು ಕೊಳ್ಳಬಹುದಾಗಿದೆ. ಅರ್ಹ ಅಭ್ಯರ್ಥಿಗಳು ದಾಖಲಿಸಿರುವ ಇಚ್ಛೆ/ ಆಯ್ಕೆಗಳನ್ನು ಪರಿಗಣಿಸಿ, ಮೆರಿಟ್ ಮತ್ತು ರೋಸ್ಟರ್ ಪದ್ಧತಿ ಅನುಸಾರ ಮೊದಲನೇ ಸುತ್ತಿನ ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ತಿಳಿಸಿದ್ದಾರೆ.

ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ, ಬಿಎಸ್‍ಸಿ (ನರ್ಸಿಂಗ್), ಬಿ-ಫಾರ್ಮಾ, ಫಾರ್ಮಾ-ಡಿ, ಬಿಪಿಟಿ, ಬಿಪಿಒ, ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ ಗಳ ಪ್ರವೇಶಕ್ಕಾಗಿ ಜುಲೈ 22 ರ ಸಂಜೆ 6 ಗಂಟೆವರೆಗೆ ದಾಖಲಿಸಿರುವ ಇಚ್ಛೆ/ ಆಯ್ಕೆಗಳನ್ನು (ಆಪ್ಷನ್) ಅಣಕು ಸೀಟು ಹಂಚಿಕೆ ಫಲಿತಾಂಶಕ್ಕೆ ಪರಿಗಣಿಸಲಾಗಿದೆ ಎಂದಿದ್ದಾರೆ.

ಆಯುರ್ವೇದ, ಯುನಾನಿ, ನ್ಯಾಚುರೋಪತಿ, ಯೋಗಾ ಮತ್ತು ಹೋಮಿಯೋಪತಿ ಕೋರ್ಸುಗಳಿಗೆ ಸೀಟು ಮ್ಯಾಟ್ರಿಕ್ಸ್ ಇನ್ನೂ ಬಾರದೆ ಇರುವ ಕಾರಣ ಅಣಕು ಸೀಟು ಹಂಚಿಕೆಗೆ ಈ ಕೋರ್ಸುಗಳನ್ನು ಪರಿಗಣಿಸಿಲ್ಲ. ಸೀಟು ಮ್ಯಾಟ್ರಿಕ್ಸ್ ಬಂದ ನಂತರ ಇಚ್ಛೆ/ ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗುವುದು ಎಂದವರು ತಿಳಿಸಿದ್ದಾರೆ. 

ಅಣಕು ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆ ನಂತರ ಮೊದಲನೇ ಸುತ್ತಿನ ಸೀಟು ಹಂಚಿಕೆಗೆ ಇಚ್ಛೆ/ ಆಯ್ಕೆಗಳನ್ನು ಹೊಸದಾಗಿ ಸೇರಿಸಲು, ಬೇಡದಿದ್ದಲ್ಲಿ ಅಳಿಸಲು, ಕ್ರಮಾಂಕ ಬದಲಿಸಲು, ಮಾರ್ಪಡಿಸಲು ಜುಲೈ 26 ರಿಂದ 29 ರ ಸಂಜೆ 5 ಗಂಟೆವರೆಗೆ ಅವಕಾಶ ನೀಡಲಾಗಿದೆ. ಆಗಸ್ಟ್ 1 ರಂದು ಬೆಳಿಗ್ಗೆ 11ಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗುವುದು. ಆಗಸ್ಟ್ 2 ರಂದು ಮಧ್ಯಾಹ್ನ 2 ಗಂಟೆಗೆ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು. ಬಳಿಕ ಛಾಯ್ಸ್ ಆಯ್ಕೆಗೆ ಆಗಸ್ಟ್ 4 ರಿಂದ 7 ರವರೆಗೆ ಅವಕಾಶ ನೀಡಲಾಗುವುದು. 

ಇದುವರೆಗೂ ಇಚ್ಛೆ/ ಆಯ್ಕೆಗಳನ್ನು ದಾಖಲಿಸದೇ ಇರುವ ಅಭ್ಯರ್ಥಿಗಳು ಕೂಡ ಇಷ್ಟವಿದ್ದಲ್ಲಿ 750 ರೂಪಾಯಿ ಶುಲ್ಕ ಪಾವತಿಸಿ, ಆಪ್ಷನ್ಸ್ ದಾಖಲಿಸಬಹುದು. ಮೊದಲ ಸುತ್ತಿಗೆ ನಿಗದಿಪಡಿಸಿರುವ ಕೊನೆ ದಿನಾಂಕದ ನಂತರ ಮುಂದಿನ ಯಾವುದೇ ಸುತ್ತಿಗೆ ಇಚ್ಛೆ-ಆಯ್ಕೆಗಳನ್ನು ದಾಖಲಿಸಲು ಅವಕಾಶ ಇರುವುದಿಲ್ಲ. ಹೀಗಾಗಿ ಕೋರ್ಸ್, ಶುಲ್ಕ ಇತ್ಯಾದಿ ನೋಡಿಕೊಂಡು, ಈಗಲೇ ತಮಗೆ ಇಷ್ಟವಾದ ಕಾಲೇಜು/ ಕೋರ್ಸ್‍ಗಳಿಗೆ ಇಚ್ಛೆ/ ಆಯ್ಕೆಗಳನ್ನು ದಾಖಲಿಸಬಹುದು ಎಂದು ಕೆಇಎ ನಿರ್ದೇಶಕರು ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಯುಜಿಸಿಇಟಿ/ ನೀಟ್ : ಅಣುಕು ಸೀಟು ಫಲಿತಾಂಶ ಪ್ರಕಟ : ಆಪ್ಷನ್ ಎಂಟ್ರಿ ತಿದ್ದುಪಡಿಗೆ ಜುಲೈ 26 ರಿಂದ 29ರವರೆಗೆ ಅವಕಾಶ, ಆಗಸ್ಟ್ 2 ರಂದು ಅಂತಿಮ ಫಲಿತಾಂಶ ಪ್ರಕಟ Rating: 5 Reviewed By: karavali Times
Scroll to Top