ಬಂಟ್ವಾಳ, ಜುಲೈ 08, 2025 (ಕರಾವಳಿ ಟೈಮ್ಸ್) : ಮಹಿಳೆಯೋರ್ವರು ಮನೆಯಲ್ಲೇ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾಣೆಮಂಗಳೂರು ಎಂಬಲ್ಲಿ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ ಶ್ರೀಮತಿ ವಿಜಯಾ ಕಾಮತ್ (56) ಎಂಬವರೇ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಮಹಿಳೆ. ಇವರು ಭಾನುವಾರ ರಾತ್ರಿ ಮಗ ಶಿವಾನಂದ ಕಾಮತ್ ಜೊತೆ ಊಟ ಮಾಡಿ ಎಂದಿನಂತೆ ಮಲಗುವ ಕೋಣೆಯಲ್ಲಿ ಹೋಗಿ ಮಲಗಿದ್ದಾರೆ. ಸೋಮವಾರ ಬೆಳಿಗ್ಗೆ 10 ಗಂಟೆಯಾದರೂ ತಾಯಿ ಎದ್ದು ಬರುವುದು ಕಾಣದ ಹಿನ್ನಲೆಯಲ್ಲಿ ಮಗ ಕೋಣೆಗೆ ಹೋಗಿ ನೋಡಿದಾಗ ತಾಯಿ ಫ್ಯಾನಿಗೆ ನೈಲಾನ್ ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. ತಕ್ಷಣ ಮಗ ತನ್ನ ಮಾವನನ್ನು ಕರೆಸಿ ತಾಯಿಯನ್ನು ಕೆಳಗಿಸಿ ನೋಡಿದಾಗ ಅದಾಗಲೇ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment