ಪುತ್ತೂರು , ಜುಲೈ 12, 2025 (ಕರಾವಳಿ ಟೈಮ್ಸ್) : ಬಕ್ರೀದ್ ಹಬ್ಬದ ಪ್ರಯುಕ್ತ ಮಾರಾಟಕ್ಕೆ ಆಡು ಕಳಿಸುವ ಬಗ್ಗೆ ಪುತ್ತೂರಿನ ಆಡು ವ್ಯಾಪಾರಿಯಿಂದ ಹಣ ಪಡೆದು ವಂಚಿಸಿದ ರಾಜಸ್ಥಾನ ಮೂಲದ ಉದ್ಯಮಿ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಬನ್ನೂರು ಗ್ರಾಮದ ಪಡೀಲ್-ವಿಜಯನಗರ ಬಡಾವಣೆ ನಿವಾಸಿ ಕೆ ಎಂ ಇಬ್ರಾಹಿಂ ಎಂಬವರ ಮಗ ಮಹಮ್ಮದ್ ಝುನೈದ್ ಆರೀಸ್ (26) ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಇವರು ಪ್ರತೀ ವರ್ಷ ಬಕ್ರೀದ್ ಹಬ್ಬದ ಸಮಯ ರಾಜಸ್ಥಾನ ರಾಜ್ಯದ ಜೈಪುರದ ನಾಬಾ ಎಂಬಲ್ಲಿಂದ ಆಡನ್ನು ತರಿಸಿ ಸ್ಥಳೀಯರಿಗೆ ಮಾರಾಟ ಮಾಡುತ್ತಿದ್ದು, ಅದೇ ರೀತಿ ಕಳೆದ ಮೇ 19 ರಂದು ರಾಜಸ್ಥಾನದ ಜೈಪುರದ ನಾಬಾ ಎಂಬಲ್ಲಿಗೆ ತೆರಳಿ ಅಲ್ಲಿನ ಸುಗನ್ ಎಂಬ ಸಂಸ್ಥೆಯಿಂದ ಫಾರ್ಮಿನ ಆಡು ವ್ಯಾಪಾರಿ ಆರೋಪಿತ ಲೋಕೇಶ್ ಕುಮಾರ್ ಎಂಬವರಲ್ಲಿ ಮಾತುಕತೆ ನಡೆಸಿ ಅದೇ ದಿನ 95 ಸಾವಿರ ರೂಪಾಯಿ ಹಣವನ್ನು ಎಸ್ ಬಿ ಐ ಖಾತೆಯಿಂದ ಪಾವತಿ ಮಾಡಿದ್ದು, ಬಳಿಕ 1.05 ಲಕ್ಷ ರೂಪಾಯಿ ಹಣವನ್ನು ಸ್ನೇಹಿತ ಹಫೀಪ್ ಎಂಬವರ ಎಚ್ ಡಿ ಎಫ್ ಸಿ ಬ್ಯಾಂಕ್ ಖಾತೆಯಿಂದ ಆರೋಪಿತ ವ್ಯಕ್ತಿಯ ಆಕ್ಸಿಸ್ ಬ್ಯಾಂಕ್ ಖಾತೆಗೆ ಪಾವತಿ ಮಾಡಿ ಝುನೈದ್ ಆರಿಸ್ ಪುತ್ತೂರಿಗೆ ಬಂದಿದ್ದಾರೆ. ಆ ಬಳಿಕ ಆರೋಪಿತ ಲೋಕೇಶ್ ಬಕ್ರೀದ್ ಸಮಯದಲ್ಲಿ ಆಡುಗಳನ್ನು ಕಳುಹಿಸಿಕೊಡುವುದಾಗಿ ಹೇಳಿ ಆಡನ್ನು ಸಾಲವಾಗಿ ಕೊಡಲಾಗುವುದಿಲ್ಲ. 10 ಲಕ್ಷ ರೂಪಾಯಿ ಪಾವತಿ ಮಾಡುವಂತೆ ತಿಳಿಸಿದ ಮೇರೆಗೆ ಆರೀಸ್ ಅವರು ಮೇ 22 ರಂದು ಆರೋಪಿತನ ಆಕ್ಸಿಸ್ ಬ್ಯಾಂಕ್ ಖಾತೆಗೆ 5 ಲಕ್ಷ ರೂಪಾಯಿ ಮತ್ತು 3.96 ಲಕ್ಷ ರೂಪಾಯಿ ಹಣ ಮತ್ತು ಅದೇ ದಿನ 54 ಸಾವಿರ ರೂಪಾಯಿ ಹಣವನ್ನು ಫೆÇೀನ್ ಪೇ ಮೂಲಕ ವರ್ಗಾವಣೆ ಮಾಡಿದ್ದು, 50 ಸಾವಿರ ರೂಪಾಯಿ ಹಣವನ್ನು ಪರಿಚಯದ ಉಮ್ಮರ್ ಹಾಜಿ ಎಂಬವರ ಖಾತೆಯಿಂದ ಫೆÇೀನ್ ಪೇ ಮೂಲಕ ಪಾವತಿ ಮಾಡಿರುತ್ತಾರೆ. ಆದರೆ, ಆರೋಪಿ ಲೋಕೇಶನು 250 ಆಡುಗಳನ್ನು ಬಕ್ರೀದ್ ಸಮಯದಲ್ಲಿ ಕಳುಹಿಸಿಕೊಡುವುದಾಗಿ ನಂಬಿಸಿ ಆಡುಗಳನ್ನು ಕಳುಹಿಸಿಕೊಡದೆ ನಂಬಿಕೆ ದ್ರೋಹ ಹಾಗೂ ವಂಚನೆ ಎಸಗಿರುತ್ತಾನೆ ಎಂದು ನೀಡಿದ ದೂರಿನ ಮೇರೆಗೆ ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 57/2025 ಕಲಂ 316(2), 318(4) ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment