ದಕ್ಷಿಣ ಕನ್ನಡ ಜಿಲ್ಲೆಯ 2ನೇ “ಅಕ್ಕ ಕೆಫೆ” ಉಪಾಹಾರ ಗೃಹ ಉಳ್ಳಾಲದ ಮುನ್ನೂರು ವ್ಯಾಪ್ತಿಯಲ್ಲಿ ಸ್ಪೀಕರ್ ಉದ್ಘಾಟನೆ - Karavali Times ದಕ್ಷಿಣ ಕನ್ನಡ ಜಿಲ್ಲೆಯ 2ನೇ “ಅಕ್ಕ ಕೆಫೆ” ಉಪಾಹಾರ ಗೃಹ ಉಳ್ಳಾಲದ ಮುನ್ನೂರು ವ್ಯಾಪ್ತಿಯಲ್ಲಿ ಸ್ಪೀಕರ್ ಉದ್ಘಾಟನೆ - Karavali Times

728x90

23 August 2025

ದಕ್ಷಿಣ ಕನ್ನಡ ಜಿಲ್ಲೆಯ 2ನೇ “ಅಕ್ಕ ಕೆಫೆ” ಉಪಾಹಾರ ಗೃಹ ಉಳ್ಳಾಲದ ಮುನ್ನೂರು ವ್ಯಾಪ್ತಿಯಲ್ಲಿ ಸ್ಪೀಕರ್ ಉದ್ಘಾಟನೆ

 ಉಳ್ಳಾಲ, ಆಗಸ್ಟ್ 23, 2025 (ಕರಾವಳಿ ಟೈಮ್ಸ್) : ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮ ಪಂಚಾಯತ್  ಸ್ನೇಹ ಸಂಜೀವಿನಿ ಒಕ್ಕೂಟದ ವ್ಯಾಪ್ತಿಯಲ್ಲಿ ನೂತನ “ಅಕ್ಕ ಕೆಫೆ” ಉಪಹಾರ ಗೃಹವನ್ನು ರಾಜ್ಯ ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಅವರು ಆ 23 ರಂದು ಉದ್ಘಾಟಿಸಿದರು. 

ಕೌಶಲ್ಯಾಭಿವೃದ್ಧಿ ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‍ಆರೆಲ್‍ಎಂ) -ಸಂಜೀವಿನಿ, ಜಿಲ್ಲಾ ಪಂಚಾಯತ್ ಮಹತ್ವಾಂಕ್ಷೆಯ ಯೋಜನೆ ಇದಾಗಿದೆ. ರಾಜ್ಯ ಸರ್ಕಾರದ ಮಹಿಳಾ ಅಭಿವೃದ್ಧಿಗೆ ಬಜೆಟಿನಲ್ಲಿ ಘೋಷಣೆಯಾಗಿರುವ ಅಕ್ಕ ಕೆಫೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ 2 ಕೆಫೆಗಳು ಅನುಮೋದನೆಗೊಂಡಿವೆ. 

ಇವುಗಳ ಪೈಕಿ ಈಗಾಗಲೇ ಉಜಿರೆ ಅಕ್ಕ ಕೆಫೆ ಕಾರ್ಯಾರಂಭಗೊಂಡಿದ್ದು, ಇದೀಗ ಎರಡನೇ ಅಕ್ಕ ಕೆಫೆ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ನೇಹ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವ್ಯಾಪ್ತಿಯಲ್ಲಿ ಆರಂಭಗೊಂಡಿದೆ. 

ಮುಖ್ಯಮಂತ್ರಿಗಳು ಬಜೆಟ್‍ನಲ್ಲಿ ಅಕ್ಕ ಕೆಫೆ ಆರಂಭಿಸುವ ಕುರಿತು ಘೋಷಣೆ ಮಾಡಿದ್ದರು. 2024 ಮಾರ್ಚ್ 8 ರಂದು ರಾಜ್ಯದಲ್ಲಿ ಮೊದಲ ಅಕ್ಕ ಕೆಫೆಗೆ ಚಾಲನೆ ನೀಡಲಾಗಿತ್ತು. ನಂತರ ರಾಜ್ಯದ ಇತರೆಡೆ ಸಂಜೀವಿನಿ ಸ್ವ-ಸಹಾಯ ಗುಂಪುಗಳ ನಿರ್ವಹಣೆಯಲ್ಲಿ ಆರಂಭಿಸಿದ ಅಕ್ಕ ಕೆಫೆಗಳು ಯಶಸ್ವಿಯಾಗಿವೆ. ಸಂಪೂರ್ಣವಾಗಿ ಮಹಿಳೆಯರಿಂದಲೇ ಕಾರ್ಯನಿರ್ವಹಿಸುವುದು ಅಕ್ಕ ಕೆಫೆಯ ವಿಶೇಷತೆಯಾಗಿದೆ. ಶುಚಿ ಮತ್ತು ರುಚಿಯಾದ ಆಹಾರವನ್ನು ಸಾರ್ವಜನಿಕರು ಅಕ್ಕ ಕೆಫೆಯಲ್ಲಿ ಸವಿಯಬಹುದು. ನೂತನ ಅಕ್ಕ ಕೆಫೆ ಉದ್ಘಾಟಿಸಿದ ಸ್ಪೀಕರ್, ಮಹಿಳಾ ಸಬಲೀಕರಣಕ್ಕೆ ಇದೊಂದು ಮಹತ್ವದ ಯೋಜನೆಯಾಗಿದೆ ಎಂದು ಪ್ರಶಂಸಿಸಿದರು.

ಈ ಸಂದರ್ಭ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಜಿ.ಪಂ. ಸಿಇಒ ವಿನಾಯಕ ನರ್ವಡೆ, ಯೋಜನಾ ನಿರ್ದೇಶಕ ಜಯರಾಂ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗುರುದತ್, ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೆಹನಾ ಬಾನು ಮೊದಲಾದವರು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ದಕ್ಷಿಣ ಕನ್ನಡ ಜಿಲ್ಲೆಯ 2ನೇ “ಅಕ್ಕ ಕೆಫೆ” ಉಪಾಹಾರ ಗೃಹ ಉಳ್ಳಾಲದ ಮುನ್ನೂರು ವ್ಯಾಪ್ತಿಯಲ್ಲಿ ಸ್ಪೀಕರ್ ಉದ್ಘಾಟನೆ Rating: 5 Reviewed By: karavali Times
Scroll to Top