ಬೊಂಡಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನೂತನ ಕೊಠಡಿಗಳ ಉದ್ಘಾಟನೆ - Karavali Times ಬೊಂಡಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನೂತನ ಕೊಠಡಿಗಳ ಉದ್ಘಾಟನೆ - Karavali Times

728x90

29 August 2025

ಬೊಂಡಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನೂತನ ಕೊಠಡಿಗಳ ಉದ್ಘಾಟನೆ

ಬಂಟ್ವಾಳ, ಆಗಸ್ಟ್ 29, 2025 (ಕರಾವಳಿ ಟೈಮ್ಸ್) : ಬೊಂಡಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂ ಆರ್ ಪಿ ಎಲ್ ಸಂಸ್ಥೆಯ ಸಿ ಎಸ್ ಆರ್ ಅನುದಾನದಿಂದ ಮತ್ತು ಶಾಲಾಭಿವೃದ್ಧಿ ಸಮಿತಿ, ವಿವೇಕಾನಂದ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಇತರ ಸಂಘ ಸಂಸ್ಥೆ, ದಾನಿಗಳ ನೆರವಿನಿಂದ ನೂತನವಾಗಿ ನಿರ್ಮಾಣಗೊಂಡ ತರಗತಿ ಕೊಠಡಿಗಳನ್ನು ಆಗಸ್ಟ್ 29 ರಂದು ಉದ್ಘಾಟಿಸಲಾಯಿತು. 

ಒಟ್ಟು ಮೂರು ತರಗತಿ ಕೊಠಡಿಗಳು ನಿರ್ಮಾಣವಾಗಿದ್ದು, ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್, ಎಂ ಆರ್ ಪಿ ಎಲ್ ಇದರ ಪ್ರದೀಪ್ ಕುಮಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಎಂ ಜಿ ಅವರು ನೂತನ ಕೊಠಡಿಗಳನ್ನು ಉದ್ಘಾಟಿಸಿದರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನಾಮಫಲಕ ಅನಾವರಣಗೊಳಿಸಿದರು.  

ಮಾಜಿ ಶಾಸಕ ಕೆ ಪದ್ಮನಾಭ ಕೊಟ್ಟಾರಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಡಾ ಪ್ರಭಾಕರ್ ಭಟ್ ಕಲ್ಲಡ್ಕ  ಅತಿಥಿಯಾಗಿ ಭಾಗವಹಿಸಿದ್ದರು. 

ಇದೇ ವೇಳೆ 1979ರಲ್ಲಿ ಬೊಂಡಾಲ ಸರಕಾರಿ ಶಾಲೆ ಸ್ಥಾಪನೆಗೆ ಶ್ರಮಿಸಿದ ಮಹನೀಯರನ್ನು ಹಾಗೂ ಕಟ್ಟಡ ನಿರ್ಮಿಸಿದ ಗತ್ತಿಗೆದಾರ ಗೋಪಾಲ್ ನೆಲ್ಲಿ ಹಾಗೂ ಎಂ ಆರ್ ಪಿ ಎಲ್ ಇದರ ಪ್ರದೀಪ್ ಅವರನ್ನು ಗೌರವಿಸಲಾಯಿತು. ಶಾಲಾಭಿವೃದ್ದಿಗೆ ವಿಶೇಷವಾಗಿ ಸಹಕರಿಸಿದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜನಾರ್ದನ ಕುಲಾಲ್, ವಿವೇಕಾನಂದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಂಡಾಲ ವಿನೋದ್ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ರೇಖಾ ಸಿ ಎಚ್, ನೃತ್ಯ ಶಿಕ್ಷಕ ಶ್ರೀಕಾಂತ್ ಕೊಂಡಾಣ ಹಾಗೂ ಶಿಕ್ಷಕಿಯರನ್ನು, ಅಡುಗೆ ಸಿಬ್ಬಂದಿಗಳನ್ನು, ಶಾಲೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. 

ಬಂಟ್ವಾಳ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ, ಸದಸ್ಯ ಜಯರಾಮ ಗುಂಡೂರ್, ಬಂಟ್ವಾಳ ಸಮೂಹ ಸಂಪನ್ಮೂಲ ಕೇಂದ್ರ ಸಮನ್ವಯ ಅಧಿಕಾರಿ ವಿದ್ಯಾಕುಮಾರಿ, ಬಂಟ್ವಾಳ ನಗರ ಕ್ಲಸ್ಟರ್ ಸಿ ಆರ್ ಪಿ ಸುಧಾಕರ್, ಸತೀಶ್ ಶೆಟ್ಟಿ ಬೊಂಡಾಲ, ಶಾಲಾ ನಾಯಕ ಹರಿಪ್ರಸಾದ್ ಮುಖ್ಯ ಅತಿಥಿಗಳಾಗಿದ್ದರು. 

ಶಾಲಾ ಮಕ್ಕಳಿಂದ ತುಳುನಾಡ ವೈಭವ ನೃತ್ಯ ರೂಪಕ ಪ್ರದರ್ಶಿಸಲ್ಪಟ್ಟಿತು. ಶಾಲಾ ಮುಖ್ಯ ಶಿಕ್ಷಕಿ ರೇಖಾ ಸಿ ಎಚ್ ಸ್ವಾಗತಿಸಿ, ಶಿಕ್ಷಕಿ ಭವ್ಯ ವಂದಿಸಿದರು. ಶಿಕ್ಷಕಿ ಲಾವಣ್ಯ ಹಾಗೂ ಸೌಮ್ಯ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು ಶಿಕ್ಷಕಿಯರಾದ ಕಿಶೋರಿ ಹಾಗೂ ಭವ್ಯ ಮಾತಾಜಿ ಸಹಕರಿಸಿದರು. ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.

  • Blogger Comments
  • Facebook Comments

0 comments:

Post a Comment

Item Reviewed: ಬೊಂಡಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನೂತನ ಕೊಠಡಿಗಳ ಉದ್ಘಾಟನೆ Rating: 5 Reviewed By: karavali Times
Scroll to Top