ಬಂಟ್ವಾಳ, ಆಗಸ್ಟ್ 29, 2025 (ಕರಾವಳಿ ಟೈಮ್ಸ್) : ಒಗ್ಗಟ್ಟಿನಿಂದ ಮಾತ್ರ ಮುಂದಿನ ಪೀಳಿಗೆಯವರಿಗೆ ಸಮಾಜದಲ್ಲಿ ಯಾವುದಾದರೊಂದು ಕೊಡುಗೆ ನೀಡಲು ಸಾಧ್ಯ. ಎಲ್ಲಾ ವಯೋಮಾನದವರೂ ಸಮಾಜ ಸಂಘಟನೆಯಲ್ಲಿ ಪಾಲ್ಗೊಳ್ಳಬೇಕು. ಬಡವರಿಗೆ ಸಹಾಯ ಮಾಡಬೇಕು ಎಂದು ಬೆಂಗಳೂರು ಕುಲಾಲ ಸೇವಾ ಸಂಘದ ಅಧ್ಯಕ್ಷ ದಿವಾಕರ ಮೂಲ್ಯ ಕರೆ ನೀಡಿದರು.
ಬಿ ಸಿ ರೋಡಿನ ಪೆÇಸಳ್ಳಿ ಕುಲಾಲ ಭವನದಲ್ಲಿ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳದ ವತಿಯಿಂದ ಇತ್ತೀಚೆಗೆ ನಡೆದ ಕೃಷ್ಣ ಕೃಷ್ಣ ಶ್ರೀ ಕೃಷ್ಣಾ-ಸೀಸನ್-3 ರಲ್ಲಿ ನಡೆದ ಸಮಾರಂಭದಲ್ಲಿ ‘ನಮ್ಮೂರ ಟೆಕ್ನೀಶಿಯನ್’ ಟೆಕ್ನೀಶಿಯನ್ ಅವರುಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಟೋ ಲೈನ್ಸ್ ಗ್ಯಾರೇಜ್ ಮಾಲಕ ಸುಧಾಕರ ಸಾಲ್ಯಾನ್ ಮಾತನಾಡಿ, ಗ್ಯಾರೇಜ್ ಕೆಲಸಗಾರರಿಗೆ ವೇದಿಕೆಗಳು ಸಿಗುವುದು ಬಹಳ ಕಡಿಮೆ. ಆದರೆ ನಮ್ಮೂರ ಟೆಕ್ನೀಶಿಯನ್ ಕಾರ್ಯಕ್ರಮದಲ್ಲಿ ಸುಮಾರು ನೂರಕ್ಕಿಂತಲೂ ಅಧಿಕ ಟೆಕ್ನೀಶಿಯನ್ ಗಳನ್ನು ಗುರುತಿಸಿ ಸನ್ಮಾನಿಸಿರುವುದು ನಮೆಗೆಲ್ಲ ಹೆಮ್ಮೆಯಾಗಿದೆ. ಟೆಕ್ನೀಶಿಯನ್ ಗಳಿಗೆ ಸನ್ಮಾನ ಕಾರ್ಯಕ್ರಮ ಇದು ರಾಜ್ಯದಲ್ಲೆ ಮೊದನೆಯದಾಗಿರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಮೇಶ್ ಸಾಲ್ಯಾನ್ ಮಾತನಾಡಿ, ಕೃಷ್ಣ ವೇಷ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ನೂರಾರು ಸ್ಪರ್ಧಾಳುಗಳು ಭಾಗವಹಿಸಿರುವುದು ತುಂಬಾ ಸಂತೋಷವಾಗಿದೆ. ಇದರಿಂದಾಗಿ ಬಾಲ್ಯದಿಂದಲೇ ಮಕ್ಕಳಿಗೆ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಲು ಅವಕಾಶ ಸಿಕ್ಕಿದಂತಾಗುತ್ತದೆ ಎಂದರು.
ಹಿರಿಯ ಟೆಕ್ನೀಶಿಯನ್ ಮಾಧವ ಕುಲಾಲ್ ಮತ್ತು ಮಹಿಳಾ ಅಟೋ ಚಾಲಕಿ ವನಿತ ಮತ್ತು ಬಂಟ್ವಾಳ ತಾಲೂಕಿನ 116 ಟೆಕ್ನೀಶಿಯನ್‍ಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಬೆಂಗಳೂರು ಉದ್ಯಮಿ ಐ ಉಮೇಶ್ ಬಂಗೇರ, ಜಿಲ್ಲಾ ಗ್ಯಾರೇಜ್ ಸಂಘದ ಅಧ್ಯಕ್ಷ ಪದ್ಮನಾಭ ಕುಲಾಲ್, ಪ್ರಮುಖರಾದ ನೀಲಪ್ಪ ಸಾಲ್ಯಾನ್, ವಿಜಯ ಕುಲಾಲ್ ಬೆಂಗಳೂರು, ಜಿಲ್ಲಾ ಮಾತೃ ಸಂಘದ ದಳಪತಿ ಪ್ರದೀಪ್ ಅತ್ತಾವರ ಭಾಗವಹಿಸಿದ್ದರು. ಸೇವಾದಳದ ಕಾರ್ಯದರ್ಶಿ ರಾಜೇಶ್ ಭಂಡಾರಿಬೆಟ್ಟು ಸ್ವಾಗತಿಸಿ, ಗಣೇಶ್ ದುಗನಕೋಡಿ ವಂದಿಸಿದರು. ಕವಿತಾ ಯಾದವ್ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment