ಬೋಳಂತೂರು : ತೋಟದ ಜಮೀನಿನ ಪಕ್ಕ ಸತ್ತ ಕರು ಎಸೆದು ಹೋದ ದುಷ್ಕರ್ಮಿಗಳು - Karavali Times ಬೋಳಂತೂರು : ತೋಟದ ಜಮೀನಿನ ಪಕ್ಕ ಸತ್ತ ಕರು ಎಸೆದು ಹೋದ ದುಷ್ಕರ್ಮಿಗಳು - Karavali Times

728x90

5 August 2025

ಬೋಳಂತೂರು : ತೋಟದ ಜಮೀನಿನ ಪಕ್ಕ ಸತ್ತ ಕರು ಎಸೆದು ಹೋದ ದುಷ್ಕರ್ಮಿಗಳು

 ಬಂಟ್ವಾಳ, ಆಗಸ್ಟ್ 05, 2025 (ಕರಾವಳಿ ಟೈಮ್ಸ್) : ವ್ಯಕ್ತಿಯೋರ್ವರ ಕೃಷಿ ಜಮೀನಿನ ರಸ್ತೆ ಪಕ್ಕದಲ್ಲಿ ಮೃತ ಹೆಣ್ಣು ಕರುವನ್ನು ಎಸೆದು ಹೋಗಿರುವ ಘಟನೆ ಬೋಳಂತೂರು ಗ್ರಾಮದ ಮನಲಿತೋಟ ಎಂಬಲ್ಲಿ ಸೋಮವಾರ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ಬಗ್ಗೆ ಅಮ್ಟೂರು ಗ್ರಾಮದ ಕೆದ್ಲ ನಿವಾಸಿ ಹರೀಶ್ ರಾವ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಇವರ ಮನಲಿ ತೋಟ ಎಂಬಲ್ಲಿರುವ ಕೃಷಿ ಜಮೀನಿನ ಪಕ್ಕದ ರಸ್ತೆ ಬದಿಯಲ್ಲಿ ಸುಮಾರು 5-6 ತಿಂಗಳ ಪ್ರಾಯದ ಕಂದು ಬಣ್ಣದ ಮೃತ ಹೆಣ್ಣು ಕರುವಿನ ಮೃತದೇಹವನ್ನು ರಾತ್ರಿ ವೇಳೆ ಯಾರೋ ಎಸೆದು ಹೋಗಿರುತ್ತಾರೆ. ಪರಿಣಾಮ ಪರಿಸರದಲ್ಲಿ ದುರ್ವಾಸನೆ ಬೀರುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ ಎಂದು ನೀಡಿರುವ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬೋಳಂತೂರು : ತೋಟದ ಜಮೀನಿನ ಪಕ್ಕ ಸತ್ತ ಕರು ಎಸೆದು ಹೋದ ದುಷ್ಕರ್ಮಿಗಳು Rating: 5 Reviewed By: karavali Times
Scroll to Top