ಶಂಭೂರು : ಕೋಳಿ ಅಂಕ ಜೂಜಾಟ ಸ್ಥಳಕ್ಕೆ ಪೊಲೀಸರ ದಾಳಿ, ನಾಲ್ವರು ವಶಕ್ಕೆ - Karavali Times ಶಂಭೂರು : ಕೋಳಿ ಅಂಕ ಜೂಜಾಟ ಸ್ಥಳಕ್ಕೆ ಪೊಲೀಸರ ದಾಳಿ, ನಾಲ್ವರು ವಶಕ್ಕೆ - Karavali Times

728x90

5 August 2025

ಶಂಭೂರು : ಕೋಳಿ ಅಂಕ ಜೂಜಾಟ ಸ್ಥಳಕ್ಕೆ ಪೊಲೀಸರ ದಾಳಿ, ನಾಲ್ವರು ವಶಕ್ಕೆ

ಬಂಟ್ವಾಳ, ಆಗಸ್ಟ್ 05, 2025 (ಕರಾವಳಿ ಟೈಮ್ಸ್) : ಶಂಭೂರು ಗ್ರಾಮದ ಕಾಪಿಕಾಡು ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕದ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಸೋಮವಾರ ಸಂಜೆ ದಾಳಿ ನಡೆಸಿದ್ದಾರೆ. 

ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ದಾಳಿ ನಡೆಸಿದ್ದು, ಸ್ಥಳದಲ್ಲಿ ಸುಮಾರು 10 ಜನರ ತಂಡ ಕೋಳಿ ಅಂಕ ಜುಗಾರಿಯಲ್ಲಿ ಭಾಗವಹಿಸಿದ್ದರು. ಈ ಪೈಕಿ ಕೆಲವರು ಓಡಿ ಹೋಗಿದ್ದು, 4 ಜನರನ್ನು ಬಂಧಿಸಲಾಗಿದೆ. ಬಂಧಿತರನ್ನು ಲೋಕೇಶ್, ಸಂತೋಷ್, ಪುರುಷೋತ್ತಮ, ಮೋಹನದಾಸ ಎಂದು ಹೆಸರಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಶಂಭೂರು : ಕೋಳಿ ಅಂಕ ಜೂಜಾಟ ಸ್ಥಳಕ್ಕೆ ಪೊಲೀಸರ ದಾಳಿ, ನಾಲ್ವರು ವಶಕ್ಕೆ Rating: 5 Reviewed By: karavali Times
Scroll to Top