ಧರ್ಮಸ್ಥಳ, ಆಗಸ್ಟ್ 11, 2025 (ಕರಾವಳಿ ಟೈಮ್ಸ್) : ಬೈಕಿನಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ತಡೆದ ಯೂಟ್ಯೂಬ್ ಕ್ಯಾಮೆರಾಮೆನ್ ಸಹಿತ ಮೂವರು ಹಲ್ಲೆ ನಡೆಸಿದ ಆರೋಪದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಉಜಿರೆ ನಿವಾಸಿ ಹರೀಶ್ ನಾಯ್ಕ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಆ 6 ರಂದು ಮಧ್ಯಾಹ್ನ ಧರ್ಮಸ್ಥಳ ಗ್ರಾಮದ ಪಾಂಗಾಳ ರಸ್ತೆ ಬಳಿ ಮೋಟಾರ್ ಸೈಕಲ್ ನಲ್ಲಿ ಬರುತ್ತಿದ್ದಾಗ, ಅಲ್ಲಿ ವಿಡಿಯೋ ಕ್ಯಾಮರಾ ಹಿಡಿದುಕೊಂಡು ನಿಂತಿದ್ದ ಮೂವರು ವ್ಯಕ್ತಿಗಳು ನಿಲ್ಲಿಸುವಂತೆ ಸೂಚಿಸಿರುತ್ತಾರೆ. ಆ ವೇಳೆ ಬೈಕ್ ನಿಲ್ಲಿಸಿ ವಿಚಾರಿಸಿದಾಗ, ತನ್ನನ್ನು ರಾಂ ಪೇಜ್ ಯೂಟ್ಯೂಬರ್ ಎಂದು ಪರಿಚಯಿಸಿಕೊಂಡಾತ, ಧರ್ಮಸ್ಥಳ ಪರಿಸರದಲ್ಲಿ ಹೆಣಗಳನ್ನು ಹೂತಿರುವ ಬಗ್ಗೆ ವಿಚಾರಿಸಿ, ಬಳಿಕ ತಕರಾರು ತೆಗೆದು, ಕುಡ್ಲಾ ರಾಂ ಪೇಜ್ ಎಂಬ ಯೂ ಟ್ಯೂಬರ್ ಹಾಗೂ ಆತನೊಂದಿಗೆ ಇದ್ದ ಇನ್ನಿಬ್ಬರು ಏಕಾಏಕಿ ಹಲ್ಲೆ ನಡೆಸಿರುತ್ತಾರೆ ಎಂದು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 50/2025 ಕಲಂ 126(2),115(2), 352 ಜೊತೆಗೆ 3(5) ಬಿಎನ್ ಎಸ್ ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment