ಈ ಬಗ್ಗೆ ಸಿ ಸುಬ್ರಹ್ಮಣ್ಯ ಬಂಟ್ವಾಳ ಎಂಬವರು ಸಿ ಇ ಎನ್ ಠಾಣೆಗೆ ದೂರು ನೀಡಿದ್ದು, ಜುಲೈ 20 ರಂದು ಇವರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಫೈವ್ ಪೈಸಾ ಎಂಬ ಶೇರ್ ಮಾರ್ಕೆಟಿನಲ್ಲಿ ಹಣ ಹೂಡಿಕೆ ಮಾಡುತ್ತೀರಾ ಎಂದು ಕೇಳಿದ್ದಕ್ಕೆ ಒಪ್ಪಿಕೊಂಡು ಫೈವ್ ಪೈಸಾ ಮ್ಯಾಕ್ಸ್ ಆಪ್ ಡೌನ್ ಲೋಡ್ ಮಾಡಲು ತಿಳಿಸಿ ಲಿಂಕ್ ಕಳಿಸಿದ್ದಾರೆ.
ಲಿಂಕ್ ಮೂಲಕ ಕನಿಷ್ಠ 5 ಸಾವಿರ ರೂಪಾಯಿ ಹೂಡಿಕೆ ಮಾಡಿ ಖಾತೆ ತೆರೆಯಲು ತಿಳಿಸಿದ್ದಕ್ಕೆ ಸುಬ್ರಹ್ಮಣ್ಯ ಅವರು 40 ಸಾವಿರ ರೂಪಾಯಿ ಹಣ ಹಾಕಿ ಖಾತೆ ತೆರೆದಿರುತ್ತಾರೆ. ನಂತರ ಅದರಲ್ಲಿ ಶೇರ್ ಮಾರ್ಕೆಟಿಗಾಗಿ ಹಣ ಹೂಡಿಕೆ ಮಾಡಲು ತಿಳಿಸಿದಂತೆ ಸುಬ್ರಹ್ಮಣ್ಯ ಅವರು ಖಾತೆ ತೆರೆಯಲು ಹಾಕಿದ 40 ಸಾವಿರ ರೂಪಾಯಿ ಹಣದಲ್ಲಿ 1 ಸಾವಿರ ರೂಪಾಯಿ ಹಣವನ್ನು ವಿತ್ ಡ್ರಾ ಮಾಡಿರುತ್ತಾರೆ. ನಂತರ ಶೇರ್ ಮಾರ್ಕೆಟಿನಲ್ಲಿ ಹಣ ಹೂಡಿಕೆ ಮಾಡುವ ಸಲುವಾಗಿ ಸುಬ್ರಹ್ಮಣ್ಯ ಅವರು ವಂಚಕರ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 24.90 ಲಕ್ಷ ರೂಪಾಯಿ ಹಣವನ್ನು ಹಾಕಿರುತ್ತಾರೆ. ಈ ಹಣವನ್ನು ವಿಥ್ ಡ್ರಾ ಮಾಡಲು ಹೋದಾಗ ವಿತ್ ಡ್ರಾ ಆಗಿರುವುದಿಲ್ಲ. ಕರೆ ಮಾಡಿದ ಅಪರಿಚಿತ ವ್ಯಕ್ತಿ 24.90 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment