ಬಂಟ್ವಾಳ, ಆಗಸ್ಟ್ 19, 2025 (ಕರಾವಳಿ ಟೈಮ್ಸ್) : ಬಂಟ್ವಾಳದ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಪಾರ್ಸೆಲ್ ಬಂದಿದ್ದು, ಅದರ ಕ್ಲಿಯರೆನ್ಸಿಗಾಗಿ ಹಣ ಕಟ್ಟಲು ಹೇಳಿ ಲಕ್ಷಾಂತರ ರೂಪಾಯಿ ವಂಚಿಸಿದ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ನಿವಾಸಿ ಅಬ್ದುಲ್ ಜಬ್ಬಾರ್ ಎಂಬವರು ಈ ಬಗ್ಗೆ ದೂರು ನೀಡಿದ್ದು, ಒಬ್ಬ ವ್ಯಕ್ತಿಯು ದೆಹಲಿ ಏರ್ ಪೋರ್ಟ್ ನಿಂದ ಕರೆ ಮಾಡುವುದಾಗಿಯೂ ತನಗೆ ಒಂದು ಪಾರ್ಸೆಲ್ ಬಂದಿದ್ದು, ಅದರ ಕಸ್ಟಮ್ಸ್ ಕ್ಲಿಯರೆನ್ಸ್ ಚಾರ್ಜ್ ಬಗ್ಗೆ 1.65 ಲಕ್ಷ ರೂಪಾಯಿ ಕಟ್ಟಲು ತಿಳಿಸಿದ್ದಾರೆ. ಅದರಂತೆ ಹಂತ ಹಂತವಾಗಿ ಅಪರಿಚಿತ ವ್ಯಕ್ತಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಒಟ್ಟು 3.82 ರೂಪಾಯಿಗಳನ್ನು ಅವರು ನೀಡಿದ ಬ್ಯಾಂಕ್ ಖಾತೆಗಳಿಗೆ ಪಾವತಿ ಮಾಡಿದ್ದೇನೆ. ಹಾಗೂ ಫಾರಿನ್ ಕರೆನ್ಸಿಯನ್ನು ಕೊರಿಯರ್ ಮೂಲಕ ಕಳುಹಿಸಿಕೊಡುವುದಾಗಿ ಹೇಳಿ ನನ್ನಿಂದ ಹಣವನ್ನು ಪಡೆದು ಯಾವುದೇ ಗಿಪ್ಟ್ ಕಳುಹಿಸದೇ ಮೋಸ ಮಾಡಿದ್ದಾರೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ಸಿ ಇ ಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment