ಬಂಟ್ವಾಳ, ಆಗಸ್ಟ್ 19, 2025 (ಕರಾವಳಿ ಟೈಮ್ಸ್) : ಟೆಲಿಗ್ರಾಂ ಆಪ್ ಮೂಲಕ ಬಂದ ಮೆಸೇಜ್ ನಂಬಿ ಮಹಿಳೆಯೋರ್ವರು ಲಕ್ಷಾಂತರ ರೂಪಾಯಿ ಕಳೆದುಕೊಂಡ ಬಗ್ಗೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಹಣ ಕಳೆದುಕೊಂಡ ಬಂಟ್ವಾಳ ನಿವಾಸಿ ದಿವ್ಯ (27) ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಆಗಸ್ಟ್ 8 ರಂದು ತನ್ನ ಮೊಬೈಲಿಗೆ ಅಪರಿಚಿತರು ಕಳಿಸಿದ ಲಿಂಕ್ ನಿಂದ ಟೆಲಿಗ್ರಾಂ ಮೇಸೇಜ್ ಕಳುಹಿಸಲು ದಿನಕ್ಕೆ 180 ರಿಂದ 6400 ವರೆಗೆ ಗಳಿಸಬಹುದು ಎಂದು ತಿಳಿಸಿದಂತೆ ಅವರು ಟೆಲಿಗ್ರಾಂ ಲಿಂಕ್ ಓಪನ್ ಮಾಡಿ ವಂಚಕರು ತಿಳಿಸಿದ ಖಾತೆಗಳಿಗೆ ಹಂತ ಹಂತವಾಗಿ ಆಗಸ್ಟ್ 8 ರಿಂದ 13 ರವರೆಗಿನ ಅವಧಿಯಲ್ಲಿ ಒಟ್ಟು 1,76,860 /- ರೂಪಾಯಿ ಹಣ ಹಾಕಿದ್ದಾರೆ. ಸದ್ರಿ ಹಣವನ್ನು ವಿತ್ ಡ್ರಾ ಮಾಡಲು ಆಗಿರುವುದಿಲ್ಲ ಎಂದು ಅವರು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment