ಬಂಟ್ವಾಳ, ಆಗಸ್ಟ್ 15, 2025 (ಕರಾವಳಿ ಟೈಮ್ಸ್) : ನಮ್ಮ ದೇಶದ ಸ್ವಾತಂತ್ರ್ಯವನ್ನು ಪಡೆಯುವಲ್ಲಿ ಅದೆಷ್ಟೋ ಶಾಂತಿ-ಕ್ರಾಂತಿಯ ರೂಪದಲ್ಲಿ ಹೋರಾಟ ಮಾಡಿ ಹುತಾತ್ಮರಾದ ಹಿರಿಯರನ್ನು ನಾವು ನಿತ್ಯ ನೆನಪಿಸಿಕೊಳ್ಳಬೇಕು. ಅವರು ದೊರಕಿಸಿ ಕೊಟ್ಟ ಈ ಪುಣ್ಯ ಭೂಮಿಯನ್ನು ನಿಜಕ್ಕೂ ನಾವು ಗೌರವಪೂರ್ವಕವಾಗಿ ಕಾಪಿಟ್ಟುಕೊಳ್ಳಬೇಕು. ಅದಕ್ಕಾಗಿ ನಿತ್ಯ ನಮ್ಮ ನಮ್ಮ ಕಾಯಕದಲ್ಲಿ ಶ್ರದ್ಧೆ ಭಕ್ತಿಯಿಂದ ತೊಡಗಿ, ಸ್ವಚ್ಚತೆ, ಅಚ್ಚುಕಟ್ಟುತನ, ಪ್ರಾಮಾಣಿಕತೆ, ಸಹೋದರತೆಯೇ ಮೊದಲಾದ ಗುಣಗಳಿಂದ ಬದುಕಿ ಬಾಳಬೇಕು.ಇವೆಲ್ಲವುಗಳಿಗೂ ಮೂಲವಾದ ದೇಶ ರಕ್ಷಣೆಯ ವಿಚಾರ ಆಚಾರವು ಸದಾ ತನು ಮನದಲ್ಲಿ ಜಾಗೃತವಾಗಿರಬೇಕು ಎಂದು ತುಂಬೆ ಆಂಗ್ಲ ಮಾದ್ಯಮ ಪ್ರೌಢಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ನಿಸಾರ್ ಅಹಮದ್ ವಳವೂರು ಹೇಳಿದರು.
ತುಂಬೆಯ ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ಇದರ ವತಿಯಿಂದ ನಡೆದ ದೇಶದ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಗೈದು ಅವರು ಮಾತನಾಡಿದರು.
ಪಿಟಿಎ ಪದಾಧಿಕಾರಿಗಳಾದ ಮ್ಯಾಕ್ಸಿಂ ಕುವೆಲ್ಲೋ, ಶಾಫಿ ಅಮ್ಮೆಮ್ಮಾರ್, ಮುಖ್ಯ ಶಿಕ್ಷಕಿಯರಾದ ಶ್ರೀಮತಿ ವಿದ್ಯಾ ಕೆ, ಶ್ರೀಮತಿ ಮಲ್ಲಿಕಾ ಶೆಟ್ಟಿ, ದೈಹಿಕ ಶಿಕ್ಷಣ ಬೋಧಕರಾದ ಸಾಯಿರಾಂ ಜೆ ನಾಯಕ್ ಕೆ, ಮೋಲಿ ಎಡ್ನಾ, ಆಡಳಿತಾಧಿಕಾರಿ ಕಿಶೋರ್ ಸುವರ್ಣ ಮೊದಲಾದವರು ಭಾಗವಹಿಸಿದ್ದರು.
ಕಾಲೇಜು ಪ್ರಾಂಶುಪಾಲ ವಿ ಎಸ್ ಭಟ್ ಸ್ವಾಗತಿಸಿ, ಹಿರಿಯ ಉಪನ್ಯಾಸಕ ಕೆ ದಿನೇಶ ಶೆಟ್ಟಿ ಅಳಿಕೆ ವಂದಿಸಿದರು. ಪ್ರೌಢಶಾಲಾ ವಿದ್ಯಾರ್ಥಿನಿಯರು ಝಂಡಾ ಊಂಚಾ ಮತ್ತು ನಾಡ ಗೀತೆ ಪ್ರಸ್ತುತ ಪಡಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ರೈ ಬಿ ಕಾರ್ಯಕ್ರಮ ನಿರೂಪಿಸಿದರು.









0 comments:
Post a Comment