22ನೇ ವರ್ಷದ ಜಕ್ರಿಬೆಟ್ಟು ಗಣೇಶೋತ್ಸವಕ್ಕೆ ಅದ್ದೂರಿ ಚಾಲನೆ : ಆ 31ರಂದು ಶೋಭಾ ಯಾತ್ರೆ
ಬಂಟ್ವಾಳ, ಆಗಸ್ಟ್ 27, 2025 (ಕರಾವಳಿ ಟೈಮ್ಸ್) : ಸ್ವಾತಂತ್ರ್ಯ ಚಳುವಳಿಯಲ್ಲಿ ದಾಸ್ಯ ಸಂಕೋಲೆಯಿಂದ ಮುಕ್ತಗೊಳಿಸುವ ಉದ್ದೇಶದಿಂದ ಬಾಲಗಂಗಾಧರ ತಿಲಕರು ಜನರನ್ನು ಜಾತಿ-ಧರ್ಮ, ವರ್ಗ ಬೇಧ ಮರೆತು ಒಟ್ಟುಗೂಡಿಸಲು ಕಂಡುಕೊಂಡ ಮಾರ್ಗ ಸಾರ್ವಜನಿಕ ಗಣೇಶೋತ್ಸವವಾಗಿದೆ. ತಿಲಕರ ಅದೇ ಸಾಮಾಜಿಕ ಸಾಮರಸ್ಯ ಸಾರುವ ಅದನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಇಂದು ಜಕ್ರಿಬೆಟ್ಟು ಗಣೇಶೋತ್ವವನ್ನು ಸಮಾಜದ ಎಲ್ಲ ವರ್ಗದ ಸೇರುವಿಕೆಯಿಂದ “ಬಂಟ್ವಾಳ ಹಬ್ಬ”ವಾಗಿ ಆಚರಿಸಲಾಗುತ್ತಿದೆ ಎಂದು ಸ್ವಾತಂತ್ರ್ಯ ಚಳುವಳಿಯಲ್ಲಿ ದಾಸ್ಯ ಸಂಕೋಲೆಯಿಂದ ಮುಕ್ತಗೊಳಿಸುವ ಉದ್ದೇಶದಿಂದ ಬಾಲಗಂಗಾಧರ ತಿಲಕರು ಜನರನ್ನು ಜಾತಿ-ಧರ್ಮ, ವರ್ಗ ಬೇಧ ಮರೆತು ಒಟ್ಟುಗೂಡಿಸಲು ಕಂಡುಕೊಂಡ ಮಾರ್ಗ ಸಾರ್ವಜನಿಕ ಗಣೇಶೋತ್ಸವವಾಗಿದೆ. ತಿಲಕರ ಅದೇ ಸಾಮಾಜಿಕ ಸಾಮರಸ್ಯ ಸಾರುವ ಅದನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಇಂದು ಜಕ್ರಿಬೆಟ್ಟು ಗಣೇಶೋತ್ವವನ್ನು ಸಮಾಜದ ಎಲ್ಲ ವರ್ಗದ ಸೇರುವಿಕೆಯಿಂದ “ಬಂಟ್ವಾಳ ಹಬ್ಬ”ವಾಗಿ ಆಚರಿಸಲಾಗುತ್ತಿದೆ ಎಂದು ಮಾಜಿ ಸಚಿವ, ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ ರಮಾನಾಥ ರೈ ಹೇಳಿದರು.
ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ಬಂಟ್ವಾಳ-ಬೈಪಾಸಿನ ಜಕ್ರಿಬೆಟ್ಟುವಿನಲ್ಲಿ ಆಚರಿಸಲ್ಪಡುವ 22ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ತಾಲೂಕಿಗೊಂದು ಸಾರ್ವಜನಿಕ ಗಣೇಶೋತ್ಸವ ನಡೆಯುತ್ತಿತ್ತು. ಆದರೆ ಇಂದು ಗ್ರಾಮ ಗ್ರಾಮಗಳಲ್ಲೂ ಗಣೇಶೋತ್ಸವ ನಡೀತಾ ಇದೆ. ಹಿಂದಿನ ಕಾಲದಲ್ಲಿ ಹತ್ತು ಮನೆಗಳಿಂದ ಅಕ್ಕಿ ತೆಂಗಿನ ಕಾಯಿ ಸಂಗ್ರಹಿಸಿ ಚೌತಿ ಆಚರಿಸುತ್ತಿದ್ದರು ಆದರೆ ಇಂದು ಅಂತಹ ಪರಿಸ್ಥಿತಿ ಇಲ್ಲ. ಜನ ಸ್ಥಿತಿವಂತರಾಗಿದ್ದಾರೆ. ಹಿಂದೆ ಹಿಂದುಳಿದ ವರ್ಗಗಳ ಜನ ಬದುಕಲಿಕ್ಕಾಗಿ ಸ್ಥಿತಿವಂತರ ಅಡಿಯಾಳಾಗಿ ಜೀವಿಸುವ ಕಾಲವೊಂದಿತ್ತು. ಆದರೆ ಇಂದು ಬಡವರೂ ಕೂಡಾ ಸ್ವಾವಲಂಬನೆಯಿಂದ ಬದುಕುವಂತಾಗಿದೆ. ನಾವೆಷ್ಟೇ ಮುಂದೆ ಹೋದರೂ ಬಂದ ದಾರಿಗೆ ಒಮ್ಮೆ ತಿರುಗಿ ನೋಡಬೇಕು ಎಂದು ಸಲಹೆ ನೀಡಿದರು.
ಗಾಂಧೀಜಿಯ ಸ್ವಚ್ಚ ಗ್ರಾಮವನ್ನು ಹೊಗಳಲಾಗುತ್ತಿದೆ. ಆದರೆ ಗಾಂಧೀಜಿಯನ್ನು ಮರೆತು ಬಿಡವ ಕಾಲ ಇದಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ರೈ ಅವರು ಜಾತಿ-ಜಾತಿ, ಧರ್ಮದ ಹೆಸರಿನಲ್ಲಿ ಮಾರ್ಗದ ಮಧ್ಯೆ ರಕ್ತ ಹರಿಸುವ ಕಾಲ ಬಂದಿರುವ ಬಗ್ಗೆ ವಿಷಾದವಿದೆ. ಸಾಮಾಜಿಕ ಸಾಮರಸ್ಯಕ್ಕೆ ನಾವು ಒತ್ತು ನೀಡಬೇಕಾಗಿದೆ. ಶಾಂತಿ-ಸೌಹಾರ್ದತೆ ಭಾಷಣಕ್ಕೆ ಸೀಮಿತವಾಗದೆ ಅದು ಬದುಕಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ ಎಂದು ರಮಾನಾಥ ರೈ ಹೇಳಿದರು. ಇದೇ ವೇಳೆ ಕಳೆದ ಗಣೇಶೋತ್ಸವ ಸಂದರ್ಭ ಸಕ್ರಿಯರಾಗಿದ್ದು ಇತ್ತೀಚೆಗೆ ನಿಧನರಾದ ಆಪ್ತ ವಲಯದ ಜನಾರ್ದನ ಚೆಂಡ್ತಿಮಾರು, ಪ್ರಭಾಕರ ಪೈ ಸಹಿತ ಅಗಲಿದ ಮಂದಿಯನ್ನು ರಮಾನಾಥ ರೈ ಸ್ಮರಿಸಿದರು.
ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನಂ ಇದರ ಶ್ರೀ ವಿಖ್ಯಾತಾನಂದ ಸ್ವಾಮೀಜಿಗಳು ಆಶೀರ್ವಚನಗೈದು ಮಾತನಾಡಿ, 21 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಬಂಟ್ವಾಳದ ಶ್ರೀ ಗಣೇಶೋತ್ಸವ ಶತಮಾನವನ್ನೂ ಪೂರೈಸಲಿ. ಈ ಮೂಲಕ ಸಾಮಾಜಿಕ ಸಾಮರಸ್ಯ ನೆಲೆನಿಲ್ಲಲಿ. ಈ ನಿಟ್ಟಿನಲ್ಲಿ ಯುವ ಸಮೂಹ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.
ಮಂಗಳೂರಿನ ಖ್ಯಾತ ವೈದ್ಯ ಡಾ ಶಿವಪ್ರಸಾದ್ ರೈ ಕಾರ್ಯಕ್ರಮ ಉದ್ಘಾಟಿಸಿದರು. ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಉದ್ಯಮಿ ಉಮೇಶ್ ಸಾಲಿಯಾನ್ ಬೆಂಜನಪದವು ಮುಖ್ಯ ಅತಿಥಿಗಳಾಗಿದ್ದರು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ ಪದ್ಮಶೇಖರ ಜೈನ್, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತುಂಬೆ, ಬಂಟ್ವಾಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ ಪೂಜಾರಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಭಂಡಾರಿ, ಮಾಣಿ ಗ್ರಾ ಪಂ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಅಕ್ರಮ-ಸಕ್ರಮ ಸಮಿತಿ ಸದಸ್ಯ ಸುರೇಶ್ ಪೂಜಾರಿ ಜೋರಾ, ಇರಾ ಗ್ರಾ ಪಂ ಸದಸ್ಯ ರಝಾಕ್ ಕುಕ್ಕಾಜೆ, ಮಂಚಿ ಗ್ರಾ ಪಂ ಅಧ್ಯಕ್ಷ ಇಬ್ರಾಹಿಂ ಜಿ ಎಂ, ಪ್ರಮುಖರಾದ ಶಬೀರ್ ಸಿದ್ದಕಟ್ಟೆ, ಸುಧಾಕರ ಶೆಣೈ ಖಂಡಿಗ, ವೆಂಕಪ್ಪ ಪೂಜಾರಿ, ಕರೀಂ ಬೊಳ್ಳಾಯಿ, ಡೆಂಝಿಲ್ ನೊರೊನ್ಹಾ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೀವ್ ಶೆಟ್ಟಿ ಎಡ್ತೂರು ಸ್ವಾಗತಿಸಿ, ಬುಡಾ ಅಧ್ಯಕ್ಷ ಬೇಬಿ ಕುಂದರ್ ವಂದಿಸಿದರು. ರಾಜೀವ್ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment