ಬಂಟ್ವಾಳ, ಆಗಸ್ಟ್ 26, 2025 (ಕರಾವಳಿ ಟೈಮ್ಸ್) : ಮನೆಕೆಲಸಕ್ಕಿದೆದ ಯುವತಿಯೋರ್ವಳು ಮದ್ಯ ಸೇವೆನೆಯ ಚಟದಿಂದ ಮನೆಯಲ್ಲಿ ಮಲಗಿದಲ್ಲೇ ಮೃತಪಟ್ಟ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲ ತಾಲೂಕು, ಫಜೀರು ಗ್ರಾಮದ ಶೇನೆರೆಬೈಲು ನಿವಾಸಿ ವೆಂಕಪ್ಪ ಪೂಜಾರಿ ಅವರ ಪುತ್ರಿ ರೇವತಿ ಎಂಬವರೇ ಮೃತಪಟ್ಟ ಯುವತಿ. ಈ ಬಗ್ಗೆ ಆಕೆಯ ತಾಯಿ ಚೆನ್ನಮ್ಮ ಅವರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಇವರ ಪುತ್ರಿ ರೇವತಿ ಕೊಗ್ಗು ಬೆಳ್ಚಡ ಎಂಬವರ ಮನೆಯಲ್ಲಿ ಸುಮಾರು ವರ್ಷಗಳಿಂದ ಮನೆ ಕೆಲಸ ಮತ್ತು ತೋಟದ ಕೆಲಸ ಮಾಡಿಕೊಂಡು ಅಲ್ಲಿಯೇ ಇರುವುದಾಗಿದೆ. ಆಗಸ್ಟ್ 25 ರಂದು ಬೆಳಿಗ್ಗೆ ಮನೆ ಕೆಲಸ ಮಾಡಿ 9 ಗಂಟೆ ವೇಳೆಗೆ ಮಲಗಿದ್ದ ರೇವತಿ ಮಧ್ಯಾಹ್ನವಾದರೂ ಎದ್ದೇಳದ ಹಿನ್ನಲೆಯಲ್ಲಿ ಕೊಗ್ಗು ಅವರು ಎಬ್ಬಿಸಿದರೂ ಏಳದೆ ಇದ್ದುದರಿಂದ ಮೃತಪಟ್ಟಿರುವುದು ಗೊತ್ತಾಗಿದೆ.
ಈಕೆ ಮದ್ಯ ಸೇವನೆ ಮಾಡುವ ಚಟ ಹೊಂದಿದ್ದು, ಇದೇ ಕಾರಣದಿಂದ ಮೃತಪಟ್ಟಿರುವ ಬಗ್ಗೆ ಶಂಕಿಸಲಾಗಿದೆ. ಈ ಬಗ್ಗೆ ಆಕೆಯ ತಾಯಿ ಚೆನ್ನಮ್ಮ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
0 comments:
Post a Comment