ಬಂಟ್ವಾಳ, ಆಗಸ್ಟ್ 25, 2025 (ಕರಾವಳಿ ಟೈಮ್ಸ್) : ಇಲ್ಲಿಗೆ ಸಮೀಪದ ಕುದನೆ ವಾಸುಕೀವನ ಧರ್ಮಚಾವಡಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಸಿಂಹ ಸಂಕ್ರಮಣ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು, ದೈವಗಳಿಗೆ ಗಗ್ಗರ ಸೇವೆ ನಡೆಯಿತು. ಕ್ಷೇತ್ರದ ನಾಗದೇವರಿಗೆ ‘ಆಶ್ಲೇಷ ಬಲಿ ಪೂಜೆ’ ಪರಿವಾರ ದೈವಗಳಿಗೆ ಪರ್ವ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆ ನೆರವೇರಿತು. ಸಂಜೆ ಅಣ್ಣಪ್ಪ ಪಂಜುರ್ಲಿ ದೈವದ ಭಂಡಾರ ಇಳಿದು ದೈವದ ‘ಗಗ್ಗರ ಸೇವೆ’ ನಡೆಯಿತು.
ಈ ಸಂದರ್ಭ ಕ್ಷೇತ್ರದ ಶ್ರೀ ವರದರಾಜ್ ವಾಸುಕೀವನ, ಶ್ರೀ ಗುರುದತ್ತ ವಾಸುಕೀವನ, ಶ್ರೀ ಗುರುಮೂರ್ತಿ ನಂದಿಗಮ್, ಉದ್ಯಮಿ ಉಮಾಶಂಕರ್ ಬೆಂಗಳೂರು ಸಹಿತ ಹಲವು ಮಂದಿ ಗಣ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.















0 comments:
Post a Comment