ವಿಶ್ವಮಾನ್ಯ ಭಾರತ ನಿರ್ಮಾಣದ ಪ್ರಧಾನಿಗಳ ಕನಸು ನನಸಾಗಲು ಸಶಕ್ತ ಕಾರ್ಯಕರ್ತರ ತಂಡ ಶಕ್ತಿ ಕೇಂದ್ರದಲ್ಲಿರಬೇಕು : ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ - Karavali Times ವಿಶ್ವಮಾನ್ಯ ಭಾರತ ನಿರ್ಮಾಣದ ಪ್ರಧಾನಿಗಳ ಕನಸು ನನಸಾಗಲು ಸಶಕ್ತ ಕಾರ್ಯಕರ್ತರ ತಂಡ ಶಕ್ತಿ ಕೇಂದ್ರದಲ್ಲಿರಬೇಕು : ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ - Karavali Times

728x90

25 August 2025

ವಿಶ್ವಮಾನ್ಯ ಭಾರತ ನಿರ್ಮಾಣದ ಪ್ರಧಾನಿಗಳ ಕನಸು ನನಸಾಗಲು ಸಶಕ್ತ ಕಾರ್ಯಕರ್ತರ ತಂಡ ಶಕ್ತಿ ಕೇಂದ್ರದಲ್ಲಿರಬೇಕು : ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್

 ಬಂಟ್ವಾಳ, ಆಗಸ್ಟ್ 25, 2025 (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಡಗ-ತೆಂಕಕಜೆಕಾರು ಶಕ್ತಿ ಕೇಂದ್ರದಲ್ಲಿ ಬಿಜೆಪಿ ಕಾರ್ಯಕರ್ತರ ಅಭ್ಯಾಸ ವರ್ಗವು ಆ 24 ರಂದು ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಶಿವಪ್ರಸಾದ್ ಶೆಟ್ಟಿ ಮಾತನಾಡಿ, ಸುಶಿಕ್ಷಿತ ಕಾರ್ಯಕರ್ತರ ವ್ಯಕ್ತಿತ್ವ ನಿರ್ಮಾಣದ ಮೂಲಕ ಪಕ್ಷ ಸಂಘಟನೆಯನ್ನು ಬಲಿಷ್ಠಗೊಳಿಸುವ ಉದ್ದೇಶÀದಿಂದ ಈ ಅಭ್ಯಾಸ ವರ್ಗ ನಡೆಯುತ್ತಿರುವುದು ಸಂತೋಷದ ವಿಚಾರ ಎಂದರು. 

ಮೊದಲ ಅವಧಿಯಲ್ಲಿ “ನಮ್ಮ ವಿಚಾರಗಳು ಮತ್ತು ಪಂಚ ಪರಿವರ್ತನೆಗಳು” ಎಂಬ ವಿಷಯದ ಬಗ್ಗೆ ಬಂಟ್ವಾಳ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ ಮಾಹಿತಿ ನೀಡಿದರು. ಬಿಜೆಪಿ ಮಾಜಿ ಅಧ್ಯಕ್ಷ ದೇವದಾಸ್ ಶೆಟ್ಟಿ  ಎರಡನೇ ಅವಧಿಯಲ್ಲಿ “ಬೂತ್ ಸಂಘಟನೆ ಮತ್ತು ಸ್ಥಳೀಯಾಡಳಿತದಲ್ಲಿ ನಮ್ಮ ಪಾತ್ರ” ಎಂಬ ವಿಷಯ ಮಂಡಿಸಿದರು. ಮೂರನೇ ಅವಧಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ “ವಿಕಸಿತ ಭಾರತದ ಅಮೃತ ಕಾಲ ಮತ್ತು ನಮ್ಮ ಸಕ್ರಿಯತೆ” ಎಂಬ ವಿಷಯ ಮಂಡಿಸಿದರು.

ಸಮಾರೋಪ ಸಮಾರಂಭದಲ್ಲಿ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಮಾತನಾಡಿ, ಬಿಜೆಪಿ ಇಂದು ರಾಷ್ಟ್ರದಲ್ಲಿ ಸುಭದ್ರ ಸ್ಥಿತಿಯಲ್ಲಿರುವುದರ ಹಿಂದೆ ನಮ್ಮ ಹಿರಿಯರ ತ್ಯಾಗ ಬಲಿದಾನಗಳಿವೆ. ವಿಶ್ವ ಮಾನ್ಯ ಭಾರತ ನಿರ್ಮಾಣ ಪ್ರಧಾನಿ ನರೇಂದ್ರ ಮೋದಿಯವರ ಕನಸು. ಆ ಕನಸು ನನಸಾಗಬೇಕಾದರೆ ವೈಚಾರಿಕವಾಗಿ ಪ್ರಬುದ್ಧರಾದ ಸಶಕ್ತ ಕಾರ್ಯಕರ್ತರ ತಂಡ ಶಕ್ತಿಕೇಂದ್ರ ಮಟ್ಟದಲ್ಲಿ ಬೇಕಾಗಿದೆ. ಹಾಗಾಗಿ ವ್ಯಕ್ತಿತ್ವ ನಿರ್ಮಾಣದ ಉದ್ದೇಶದಿಂದ ಈ ಅಭ್ಯಾಸ ವರ್ಗ ನಡೆಸಲಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ದೇವದಾಸ್ ಅಬುರ, ಉಪಾಧ್ಯಕ್ಷೆ ಸುಗಂಧಿ, ಸಹಕಾರಿ ಬ್ಯಾಂಕ್ ಅಧ್ಯಕ್ಷ ಸತೀಶ್ ಬಂಗೇರ, ಉಪಾಧ್ಯಕ್ಷ ಮೋಹನಂದ ಪಾಂಡವರಕಲ್ಲು, ಸದಸ್ಯರಾದ ಸುರೇಶ್ ಬರ್ದೋಟ್ಟು, ಯಶವಂತ ಕೊಡಿಯೆಳು, ಪಕ್ಷದ ಹಿರಿಯ ಕಾರ್ಯಕರ್ತರು, ಬೂತ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ವಿಶ್ವಮಾನ್ಯ ಭಾರತ ನಿರ್ಮಾಣದ ಪ್ರಧಾನಿಗಳ ಕನಸು ನನಸಾಗಲು ಸಶಕ್ತ ಕಾರ್ಯಕರ್ತರ ತಂಡ ಶಕ್ತಿ ಕೇಂದ್ರದಲ್ಲಿರಬೇಕು : ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ Rating: 5 Reviewed By: karavali Times
Scroll to Top