ಮಂಗಳೂರು, ಆಗಸ್ಟ್ 22, 2025 (ಕರಾವಳಿ ಟೈಮ್ಸ್) : ನ್ಯೂ ಶೈನ್ ಎಂಟರ್ ಪ್ರೈಸಸ್ ಎಂಬ ಲಕ್ಕಿ ಸ್ಕೀಮಿನಲ್ಲಿ 9 ತಿಂಗಳು 1000/- ಪಾವತಿಸಿ ಕೊನೆಯ 2 ತಿಂಗಳು 1500/- ಹೀಗೆ ಒಟ್ಟು 11 ತಿಂಗಳ ಅವಧಿಗೆ ದುಡ್ಡನ್ನು ಸ್ವೀಕರಿಸಿ ಈ ಮಧ್ಯೆ 9 ತಿಂಗಳು 1000/- ಪಾವತಿಸಿ ಕೊನೆಯ 2 ತಿಂಗಳು 1500/- ಹೀಗೆ ಒಟ್ಟು 11 ತಿಂಗಳ ಲಕ್ಕಿ ಸ್ಕೀಮ್ ಹೆಸರಿನಲ್ಲಿ ಆಕರ್ಷಕ ಬಹುಮಾನ, ಬಂಪರ್ ಬಹುಮಾನಗಳಾದ ಕಾರು, ಬೈಕು, ಪ್ಲಾಟ್, ಸೈಟ್, ಚಿನ್ನದ ಉಂಗುರಗಳು ಮತ್ತು ನಗದುಗಳನ್ನು ಲಕ್ಕಿ ಡ್ರಾ ಮೂಲಕ ಸಿಕ್ಕಿದವರಿಗೆ ಇವುಗಳನ್ನು ಕೊಡುವುದಾಗಿ ತಿಳಿಸಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸುಮಾರು 4.20 ಕೋಟಿಗೂ ಮೀರಿದ ಮೊತ್ತವನ್ನು 3 ಸಾವಿರ ಜನರಿಗೆ ಲಕ್ಕಿ ಸ್ಕೀಮ್ ಕಂತು ಮುಗಿದ ನಂತರ ಡೆಪಾಸಿಟ್ ಮಾಡಿದ ಹಣ ಹಾಗೂ ಸರಿಯಾದ ಬಹುಮಾನಗಳನ್ನು ನೀಡದೇ ಮತ್ತು ಎಲ್ಲರಿಗೂ ಹಣವನ್ನು ನೀಡುತ್ತೇವೆ ಎಂದು ಆಶ್ವಾಸನೆ ನೀಡುತ್ತಾ ಕಾಟಿಪಳ್ಳ 2ನೇ ಬ್ಲಾಕ್ ಸಂಶುದ್ದೀನ್ ಸರ್ಕಲ್ ಬಳಿ ಇರುವ ಆಯಿಷಾ ಕಟ್ಟಡದಲ್ಲಿರುವ ನ್ಯೂ ಶೈನ್ ಎಂಟರ್ ಪ್ರೈಸಸ್ ಕಛೇರಿಯನ್ನು ಏಕಾಏಕಿ ಬಂದ್ ಮಾಡಿ ಸಾರ್ವಜನಿಕರಿಗೆ ಆಸೆ ಹುಟ್ಟಿಸಿ ವಂಚಿಸಲಾಗಿದ್ದು, ಆರೋಪಿಗಳಾದ ಸುರತ್ಕಲ್-ಕಾಟಿಪಳ್ಳ ಮಹಾಕಾಳಿ ದೇವಸ್ಥಾನ ಸಮೀಪದ 1ನೇ ಬ್ಲಾಕ್ ನಿವಾಸಿ ಅಬೂಬಕ್ಕರ್ ಅವರ ಪುತ್ರ ಅಹಮ್ಮದ್ ಖುರೇಶಿ (34) ಹಾಗೂ 2ನೇ ಬ್ಲಾಕ್ ಕೋರ್ದಬ್ಬು ದ್ವಾರ ಸಮೀಪದ ನಿವಾಸಿ ದಿವಂಗತ ಪಿ ಐ ಹಸನಬ್ಬ ಅವರ ಪುತ್ರ ನಝೀರ್ ಅಲಿಯಾಸ್ ನಾಸೀರ್ (39) ಎಂಬವರ ವಿರುದ್ಧ ಸೂರಿಂಜೆ ಪೊನ್ನಗಿರಿ ನಿವಾಸಿ ಶಿವ ಪ್ರಸಾದ್ (38) ಎಂಬವರು ದೂರು ನೀಡಿದ್ದು, ಇದೊಂದು ಅನಿಯಂತ್ರಿತ ಠೇವಣಿ ಯೋಜನೆ ಆಗಿದ್ದು ಸಂಬಂಧಪಟ್ಟ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿ ಇಲ್ಲದೇ ಸಾರ್ವಜನಿಕರಿಂದ ನ್ಯೂ ಶೈನ್ ಎಂಟರ್ ಪ್ರೈಸಸ್ ಹೆಸರಿನಲ್ಲಿ ಸುಮಾರು 4.20 ಕೋಟಿಗೂ ಅಧಿಕ ಹಣ ಸಂಗ್ರಹಣೆ ಮಾಡಿ ವಂಚನೆಗೈದು, ನಂಬಿಕೆ ದ್ರೋಹ, ವಂಚನೆಗೈದ ಬಗ್ಗೆ ಆಗಸ್ಟ್ 16 ರಂದು ಸುರತ್ಕಲ್ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 107/2025 ಕಲಂ 316(2), 318(4) ಬಿ.ಎನ್.ಎಸ್ ಮತ್ತು ಕಲಂ 21 ಅನಿಯಂತ್ರಿತ ಠೇವಣಿ ನಿಷೇಧ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಅಹಮ್ಮದ್ ಖುರೇಶಿ ಹಾಗೂ ನಜೀರ್ ಅಲಿಯಾಸ್ ನಾಸೀರ್ ಎಂಬವರನ್ನು ಆಗಸ್ಟ್ 19 ರಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ತನಿಖೆಯ ಸಂಬಂಧ ಆರೋಪಿಗಳನ್ನು ಆಗಸ್ಟ್ 25ರವರೆಗೆ ಪೆÇಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಬಗ್ಗೆ ಪೊಲೀಸ್ ತನಿಖೆ ಮುಂದುವರಿದಿದೆ.
ಆರೋಪಿ ಅಹಮ್ಮದ್ ಖುರೇಶಿಯ ಹೇಳಿಕೆಯಲ್ಲಿ ವಫಾ ಎಂಟರ್ ಪ್ರೈಸಸ್ ಲಕ್ಕಿ ಸ್ಕೀಂ ನ ಅಬ್ದುಲ್ ವಹಾಬ್ ಮತ್ತು ಬಶೀರ್ ಇವರೊಂದಿಗೆ ಸೇರಿ ಈ ಹಿಂದೆ ನಡೆಸಿರುವ ಲಕ್ಕಿ ಸ್ಕೀಮ್ ನ ಯೋಜನೆಗಳ ಬಗ್ಗೆ ಕೂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆರೋಪಿಗಳ ಪೈಕಿ ಅಹಮ್ಮದ್ ಖುರೇಶಿ ಮೇಲೆ ಸುರತ್ಕಲ್ ಪೆÇಲೀಸ್ ಠಾಣೆಯಲ್ಲಿ 2 ಕೊಲೆಯತ್ನ ಪ್ರಕರಣಗಳು, ಮಂಗಳೂರು ದಕ್ಷಿಣ ಪೆÇಲೀಸ್ ಠಾಣೆಯಲ್ಲಿ ಸರಕಾರಿ ನೌಕರನಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ 1 ಪ್ರಕರಣ ದಾಖಲಾಗಿರುತ್ತದೆ. ಆರೋಪಿ ನಝೀರ್ ಯಾನೇ ನಾಸೀರ್ ಮೇಲೆ ಸುರತ್ಕಲ್ ಪೆÇಲೀಸ್ ಠಾಣೆಯಲ್ಲಿ 1 ಕೊಲೆಯತ್ನ ಪ್ರಕರಣ ದಾಖಲಾಗಿದೆ.
ಆರೋಪಿತರು ಆಯಿಷಾ ಕಾಂಪ್ಲೆಕ್ಸ್ ನ ಕಛೇರಿ, ಬಿ.ಎಂ.ಆರ್ ಕಾಂಪ್ಲೆಕ್ಸ್ ನ ಕಛೇರಿ ಹಾಗೂ ಶೈನ್ ಮಾರ್ಟ್ ಕಛೇರಿಯಲ್ಲಿ ಕೃತ್ಯಕ್ಕೆ ಉಪಯೋಗಿಸಿದ ಕಂಪ್ಯೂಟರ್ ಉಪಕರಣಗಳು, ಡ್ರಾ ಕಾಯಿನ್, ಲಕ್ಕಿ ಡ್ರಾ ಪೆಟ್ಟಿಗೆ, ರಿಜಿಸ್ಟರ್ ಗಳು, ಡಿವಿಆರ್ ಗಳನ್ನು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಆರೋಪಿತರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳು, ಚಿನ್ನಾಭರಣಗಳ ಖರೀದಿ, ನಿವೇಶನ, ವಾಹನ ಖರೀದಿ, ಮನೆ, ಕಛೇರಿಯಲ್ಲಿದ್ದ ಕಂಪ್ಯೂಟರ್ ಉಪಕರಣಗಳನ್ನು ಹಾಗೂ ಇನ್ನಿತರ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಈ ಕಾಯ್ದೆಯಂತೆ ಆರೋಪಿತರು ಲಕ್ಕಿ ಸ್ಕೀಮ್ ನ ಹಣದಲ್ಲಿ ಖರೀದಿಸಿದ ಮನೆ, ನಿವೇಶನ, ಪ್ಯ್ಲಾಟ್, ವಾಹನಗಳು, ಚಿನ್ನಾಭರಣಗಳು ಹಾಗೂ ಇನ್ನಿತರ ವಸ್ತುಗಳ ಜಪ್ತಿ ಮಾಡಲು ಜಿಲ್ಲಾಧಿಕಾರಿಯವರಿಗೆ, ಉಪ ವಿಭಾಗ ದಂಡಾಧಿಕಾರಿಯವರಿಗೆ, ಕಂದಾಯ ಇಲಾಖೆಯವರಿಗೆ ಪತ್ರ ವ್ಯವಹಾರವನ್ನು ಮಾಡಲಾಗಿರುತ್ತದೆ.
ಸದ್ರಿ ಲಕ್ಕಿ ಸ್ಕೀಮ್ ಗಳಿಗೆ ಸೇರಿದ ಸದಸ್ಯರು ಹಾಗೂ ಸದಸ್ಯರಿಂದ ಹಣ ಸಂಗ್ರಹಣೆ ಮಾಡಿದ ಏಜೆಂಟ್ ರವರುಗಳು ಸಂಬಂಧಿಸಿದ ದಾಖಲಾತಿಯೊಂದಿಗೆ ಠಾಣೆಗೆ ಬಂದು ಹೇಳಿಕೆಯನ್ನು ನೀಡುವಂತೆ ಪೊಲೀಸರು ಸೂಚಿಸಿದ್ದಾರೆ. ಸದ್ರಿ ಪ್ರಕರಣದ ಆರೋಪಿತರ ಪತ್ತೆಯ ಬಗ್ಗೆ ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ ಠಾಣೆಯ ಪೆÇಲೀಸ್ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್ ಪಿ ಅವರ ನೇತೃತ್ವದಲ್ಲಿ ಠಾಣಾ ಪಿಎಸ್ಸೈಗಳಾದ ರಘುನಾಯಕ, ರಾಘವೇಂದ್ರ ನಾಯ್ಕ್, ಜನಾರ್ಧನ ನಾಯ್ಕ್, ಶಶಿಧರ ಶೆಟ್ಟಿ, ಎಎಸ್ಸೈಗಳಾದ ರಾಧಾಕೃಷ್ಣ, ಸುಕೇತ್ ಜಿ ಕೋಟ್ಯಾನ್ ಹಾಗೂ ಸಿಬ್ಬಂದಿಯವರಾದ ಅಣ್ಣಪ್ಪ, ಉಮೇಶ್, ನಾಗರಾಜ್, ಸತೀಶ್ ಸತ್ತಿಗೇರಿ, ಮಹೇಶ್ ಎನ್, ಶಫೀವುಲ್ಲಾ ಸನತಾಯಿ, ದೇವರಾಜ್, ಸುನೀಲ್ ಕುಸನಾಳ ಅವರು ಪಾಲ್ಗೊಂಡಿದ್ದರು.
ನ್ಯೂ ಇಂಡಿಯಾ ರಾಯಲ್ ಸ್ಕೀಮ್ ಹಾಗೂ ಗ್ರೀನ್ ಲೈಟ್ ಲಕ್ಕಿ ಸ್ಕೀಮ್ ಎಂಬ ಲಕ್ಕಿ ಸ್ಕೀಮ್ ನಲ್ಲಿ ಪ್ರತೀ ತಿಂಗಳು 1000/- ದಂತೆ 1 ವರ್ಷದ ಅವಧಿಗೆ ದುಡ್ಡನ್ನು ಸ್ವೀಕರಿಸಿ ಈ ಮಧ್ಯೆ ಪ್ರತೀ ತಿಂಗಳು ಲಕ್ಕಿ ಸ್ಕೀಮ್ ನ ಹೆಸರಿನಲ್ಲಿ ಆಕರ್ಷಕ ಬಹುಮಾನ, ಬಂಪರ್ ಬಹುಮಾನಗಳಾದ ಕಾರು, ಬೈಕು, ಪ್ಯ್ಲಾಟ್, ಸೈಟ್, ಚಿನ್ನದ ಉಂಗುರಗಳು ಮತ್ತು ನಗದುಗಳನ್ನು ಲಕ್ಕಿ ಡ್ರಾ ನಲ್ಲಿ ಸಿಕ್ಕಿದವರಿಗೆ ಇವುಗಳನ್ನು ಕೊಡುವುದಾಗಿ ತಿಳಿಸಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸುಮಾರು 10 ಕೋಟಿಗೂ ಮೀರಿದ 13 ಸಾವಿರ ಜನರಿಗೆ ಲಕ್ಕಿ ಸ್ಕೀಮ್ ಕಂತು ಮುಗಿದ ನಂತರ ಡೆಪಾಸಿಟ್ ಮಾಡಿದ ಹಣ ಹಾಗೂ ಸರಿಯಾದ ಬಹುಮಾನಗಳನ್ನು ನೀಡದೇ ಮತ್ತು ಎಲ್ಲರಿಗೂ ಹಣವನ್ನು ನೀಡುತ್ತೇವೆ ಎಂದು ಆಶ್ವಾಸನೆ ನೀಡುತ್ತಾ ಕಾಟಿಪಳ್ಳ 2ನೇ ಬ್ಲಾಕ್ ಸಂಶುದ್ದೀನ್ ಸರ್ಕಲ್ ಬಳಿ ಇರುವ ಬಿ.ಎಂ.ಆರ್ ಕಟ್ಟಡದಲ್ಲಿರುವ ನ್ಯೂ ಇಂಡಿಯಾ ಕಛೇರಿಯನ್ನು ಏಕಾಏಕಿಯಾಗಿ ಬಂದ್ ಮಾಡಿ ಸಾರ್ವಜನಿಕರಿಗೆ ಆಸೆ ಹುಟ್ಟಿಸಿ ವಂಚಿಸಿದ ಆರೋಪಿಗಳಾದ ಮೂಲತಃ ಬಜಪೆ ಕೆ ಪಿ ನಗರ, ಅಶ್ರಫ್ ಮಂಝಿಲ್ ನಿವಾಸಿ, ಪ್ರಸ್ತುತ ಕದ್ರಿ ಕಂಬಳ ರೋಡ್ ಮೌರಿಷ್ಕ ಪ್ಯಾಲೇಸ್ ಎ ಬ್ಲಾಕ್, 3ನೇ ಮಹಡಿ, ಫ್ಲಾಟ್ ಸಂಖ್ಯೆ 302 ರಲ್ಲಿ ವಾಸವಾಗಿರುವ ಉಮ್ಮರಬ್ಬ ಕಳವಾರು ಅವರ ಪುತ್ರ ಮೊಹಮ್ಮದ್ ಅಶ್ರಫ್ ಬಜಪೆ (43) ಹಾಗೂ ಕಾಟಿಪಳ್ಳ-ಕೃಷ್ಣಾಪುರ 7ನೇ ಬ್ಲಾಕ್, ಫಾಝಿಲ್ ಕಾಟೇಜ್ ನಿವಾಸಿ ದಿವಂಗತ ಎಂ ಎ ಇಬ್ರಾಹಿಂ ಅವರ ಪುತ್ರ ಮೊಹಮ್ಮದ್ ಹನೀಫ್ (50) ಎಂಬವರ ವಿರುದ್ಧ ಹಳೆಯಂಗಡಿ, ಚೇಳ್ಯಾರು ನಿವಾಸಿ ಭುಜಂಗ ಎ ಪೂಜಾರಿ (51) ಅವರು ದೂರು ನೀಡಿದ್ದು ಇದೊಂದು ಅನಿಯಂತ್ರಿತ ಠೇವಣಿ ಯೋಜನೆ ಆಗಿದ್ದು ಸಂಬಂಧಪಟ್ಟ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿ ಇಲ್ಲದೇ ಸಾರ್ವಜನಿಕರಿಂದ ನ್ಯೂ ಇಂಡಿಯಾ ರಾಯಲ್ ಲೈಫ್ ಸ್ಕೀಮ್ ಹೆಸರಿನಲ್ಲಿ ಸುಮಾರು 10 ಕೋಟಿಗಿಂತ ಅಧಿಕ ಹಣ ಸಂಗ್ರಹಣೆ ಮಾಡಿ ವಂಚನೆಗೈದು, ನಂಬಿಕೆ ದ್ರೋಹ ಮಾಡಿದ ಬಗ್ಗೆ ಆಗಸ್ಟ್ 11 ರಂದು ಸುರತ್ಕಲ್ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 104/2025 ಕಲಂ 316(2), 318(4) ಬಿ.ಎನ್.ಎಸ್ ಮತ್ತು ಕಲಂ 21 ಅನಿಯಂತ್ರಿತ ಠೇವಣಿ ನಿಷೇಧ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮೊಹಮ್ಮದ್ ಅಶ್ರಫ್ ಬಜಪೆ ಹಾಗೂ ಮೊಹಮ್ಮದ್ ಹನೀಫ್ ಅವರನ್ನು ಆಗಸ್ಟ್ 12 ರಂದು ದಸ್ತಗಿರಿ ಮಾಡಲಾಗಿದ್ದು ಆ 13 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ 7 ದಿನಗಳ ಪೆÇಲೀಸ್ ಕಸ್ಟಡಿಗೆ ಪಡೆದು ಬಳಿಕ ಆ 19 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದಂತೆ ಆರೋಪಿಗಳಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸದ್ರಿ ಆರೋಪಿತರು ಈ ಹಿಂದೆ ಮಾಡಿದ ನ್ಯೂ ಇಂಡಿಯಾ ಪ್ರೀಮಿಯಂ ಸ್ಕೀಮ್ ಮತ್ತು ನ್ಯೂ ಇಂಡಿಯಾ ಬಂಪರ್ ಸ್ಕೀಮ್ ಗಳನ್ನು ಕೂಡಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆರೋಪಿತರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳು, ಚಿನ್ನಾಭರಣಗಳ ಖರೀದಿ, ನಿವೇಶನ, ವಾಹನ ಖರೀದಿ, ಬೋಳೂರು ಗ್ರಾಮದ ಮನೆ, ಬಜಪೆಯಲ್ಲಿರುವ ಮನೆ, ಬಜಪೆ ತಾರಿಕಂಬ್ಳದಲ್ಲಿರುವ 5 ಪ್ಲ್ಯಾಟ್ ಗಳು, ಕಛೇರಿಯಲ್ಲಿದ್ದ ಕಂಪ್ಯೂಟರ್ ಉಪಕರಣಗಳನ್ನು ಹಾಗೂ ಇನ್ನಿತರ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾಯ್ದೆಯಂತೆ ಆರೋಪಿತರು ಲಕ್ಕಿ ಸ್ಕೀಮ್ ನ ಹಣದಲ್ಲಿ ಖರೀದಿಸಿದ ಮನೆ, ನಿವೇಶನ, ಪ್ಲ್ಯಾಟ್, ವಾಹನಗಳು, ಚಿನ್ನಾಭರಣಗಳು ಹಾಗೂ ಇನ್ನಿತರ ವಸ್ತುಗಳ ಜಪ್ತಿ ಮಾಡಲು ಜಿಲ್ಲಾಧಿಕಾರಿಯವರಿಗೆ, ಉಪ ವಿಭಾಗ ದಂಡಾಧಿಕಾರಿಯವರಿಗೆ, ಕಂದಾಯ ಇಲಾಖೆಯವರಿಗೆ ಪತ್ರ ವ್ಯವಹಾರವನ್ನು ಮಾಡಲಾಗಿರುತ್ತದೆ.
ಸದ್ರಿ ಲಕ್ಕಿ ಸ್ಕೀಮ್ ಗಳಿಗೆ ಸೇರಿದ ಸದಸ್ಯರು ಹಾಗೂ ಸದಸ್ಯರಿಂದ ಹಣ ಸಂಗ್ರಹಣೆ ಮಾಡಿದ ಏಜೆಂಟ್ ರವರುಗಳು ಸಂಬಂಧಿಸಿದ ದಾಖಲಾತಿಯೊಂದಿಗೆ ಠಾಣೆಗೆ ಬಂದು ಹೇಳಿಕೆಯನ್ನು ನೀಡಲು ಪೊಲೀಸರು ಸೂಚಿಸಿದ್ದಾರೆ.
ಪ್ರಕರಣದ ಆರೋಪಿಗಳ ಪತ್ತೆಯ ಬಗ್ಗೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಠಾಣೆಯ ಪೆÇಲೀಸ್ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್ ಪಿ ಅವರ ನೇತೃತ್ವದಲ್ಲಿ ಠಾಣಾ ಪಿಎಸ್ಸೈಗಳಾದ ರಘುನಾಯಕ, ರಾಘವೇಂದ್ರ ನಾಯ್ಕ್, ಜನಾರ್ಧನ ನಾಯ್ಕ್, ಶಶಿಧರ ಶೆಟ್ಟಿ, ಎಎಸೈಗಳಾದ ತಾರನಾಥ, ರಾಜೇಶ್ ಆಳ್ವಾ ಹಾಗೂ ಸಿಬ್ಬಂದಿಗಳಾದ ರಾಜೇಂದ್ರ ಪ್ರಸಾದ್, ಧನಂಜಯ ಮೂರ್ತಿ, ಅಜಿತ್ ಮ್ಯಾಥ್ಯೂ, ತಿರುಪತಿ, ಕಾರ್ತಿಕ್, ವಿನೋದ್ ಕುಮಾರ್, ಸಂಜೀವ ಕುಮಾರ್, ಓಂಪ್ರಕಾಶ್ ಬಿಂಗಿ, ಮಂಜುನಾಥ ಆಯಟ್ಟಿ ಅವರು ಪಾಲ್ಗೊಂಡಿದ್ದರು.
0 comments:
Post a Comment