ಬಂಟ್ವಾಳ, ಆಗಸ್ಟ್ 18, 2025 (ಕರಾವಳಿ ಟೈಮ್ಸ್) : ನರಿಂಗಾನ ಗ್ರಾಮದ ಕೈರಂಗಳ-ಕುಟಂಪದವು ನಿವಾಸಿ ಮೋಹನ್ ಪೂಜಾರಿ ಅವರು ಬಸ್ಸಿನಲ್ಲಿ ಬಿ ಸಿ ರೋಡಿಗೆ ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಅವರ ಪುತ್ರ ಹೃತಿಕ್ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಗಸ್ಟ್ 16 ರಂದು ಬೆಳಿಗ್ಗೆ 8.10 ಗಂಟೆಗೆ ಮುಡಿಪಿನಿಂದ ಬಸ್ಸಿನಲ್ಲಿ ಬಿ ಸಿ ರೋಡಿಗೆ ಹೋದವರು 8.50ಕ್ಕೆ ಬಿ ಸಿ ರೋಡಿನಲ್ಲಿ ಇಳಿದಿರುತ್ತಾರೆ ಎಂದು ಬಸ್ ನಿರ್ವಾಹಕರು ತಿಳಿಸಿದಂತೆ ಪುತ್ರ ಬಿ ಸಿ ರೋಡು ಪರಿಸರದಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿರುವುದಿಲ್ಲ ಎಂದು ಪುತ್ರ ಹೃತಿಕ್ ನೀಡಿದ ದೂರಿನಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment