ಬಂಟ್ವಾಳ, ಆಗಸ್ಟ್ 18, 2025 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಬಂಟ್ವಾಳ ಸಮೀಪದ ಕೊಟ್ರಮಣಗಂಡಿ ಎಂಬಲ್ಲಿ ಬಸ್ಸು ನಿಲ್ದಾಣ ಇದ್ದರೂ ಇಲ್ಲಿಗೆ ಬಸ್ಸುಗಳು ಪ್ರವೇಶಿಸದೆ ಭಿಕ್ಷುಕರ ತಾಣವಾಗಿ ಉಪಯೋಗ ಶೂನ್ಯವಾಗಿತ್ತು. ಈ ಬಗ್ಗೆ ವ್ಯಾಪಕ ದೂರುಗಳ ಹಿನ್ನಲೆಯಲ್ಲಿ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ ಅವರು ಸೂಕ್ತ ಕ್ರಮ ಕೈಗೊಂಡ ಹಿನ್ನಲೆಯಲ್ಲಿ ಸೋಮವಾರದಿಂದ ಇಲ್ಲಿನ ಬಸ್ಸು ನಿಲ್ದಾಣಕ್ಕೆ ಖಾಸಗಿ ಬಸ್ಸುಗಳ ಪ್ರವೇಶ ಆಗಿದೆ.
ವಾಮಪದವು, ಮೂಡಬಿದ್ರೆ ಹಾಗೂ ಸಿದ್ದಕಟ್ಟೆ ಕಡೆಗೆ ಸಂಚರಿಸುವ ಖಾಸಗಿ ಬಸ್ಸುಗಳು ಸೋಮವಾರದಿಂದ ಕೊಟ್ರಮಣಗಂಡಿ ಬಸ್ಸು ನಿಲ್ದಾಣಕ್ಕೆ ಪ್ರವೇಶಿಸಿದೆ. ಪುರಸಭಾಧ್ಯಕ್ಷರು, ಪ್ರಭಾರ ಮುಖ್ಯಾಧಿಕಾರಿ ಮತ್ತಡಿ ಹಾಗೂ ಬಂಟ್ವಾಳ ಸಂಚಾರಿ ಪೊಲೀಸ್ ಅಧಿಕಾರಿ ಸುತೇಶ್ ಕುಮಾರ್ ಅವರು ಈ ಮಾರ್ಗವಾಗಿ ಸಂಚರಿಸುವ ಖಾಸಗಿ ಬಸ್ ಚಾಲಕ-ಮಾಲಕರಿಗೆ ಬಸ್ಸು ನಿಲ್ದಾಣ ಪ್ರವೇಶಿಸಿಯೇ ಸಂಚರಿಸಬೇಕು ಎಂಬ ಸೂಕ್ತ ಹಾಗೂ ಕಟ್ಟುನಿಟ್ಟಿನ ಸೂಚನೆ ನೀಡಿದ ಹಿನ್ನಲೆಯಲ್ಲಿ ಇದೀಗ ಇಲ್ಲಿನ ಬಸ್ ನಿಲ್ದಾಣ ಉಪಯೋಗಕ್ಕೆ ದೊರೆತಂತಾಗಿದೆ. ಮುಂದಿನ ದಿನಗಳಲ್ಲಿ ಈ ಮಾರ್ಗವಾಗಿ ಸಂಚರಿಸುವ ಖಾಸಗಿ ರೂಟ್ ಬಸ್ಸುಗಳು ಕೊಟ್ರಮಣಗಂಡಿ ನಿಲ್ದಾಣಕ್ಕೆ ಕಡ್ಡಾಯವಾಗಿ ಪ್ರವೇಶಿಸಿ ಪ್ರಯಾಣಿಕರನ್ನು ಹತ್ತಿಸಿ, ಇಳಿಸುವ ಕೆಲಸ ನಿರ್ವಹಿಸಬೇಕಾಗಿದೆ.
0 comments:
Post a Comment