ಬಂಟ್ವಾಳ, ಆಗಸ್ಟ್ 12, 2025 (ಕರಾವಳಿ ಟೈಮ್ಸ್) : ಕೊಡಾಜೆ ಬದ್ರಿಯಾ ಜುಮಾ ಮಸೀದಿ ಇದರ ಅಧೀನದ ಪಂತಡ್ಕ ತರ್ಬಿಯತುಲ್ ಇಸ್ಲಾಂ ಮದ್ರಸದಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಹಾಗೂ ಶಿಕ್ಷಕ-ರಕ್ಷಕ ಸಭೆ ನಡೆಯಿತು.
ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೆÇನ್ಮಳ ಅವರು ಸ್ಮಾರ್ಟ್ ಕ್ಲಾಸ್ ಹಾಗೂ ಶಿಕ್ಷಕ ರಕ್ಷಕರ ಸಭೆ ಉದ್ಘಾಟಿಸಿದರು. ಮಸೀದಿ ಅಧ್ಯಕ್ಷ ಅಬ್ಬಾಸ್ (ಮೆಸ್ಕಾಂ) ನೇರಳಕಟ್ಟೆ ಅಧ್ಯಕ್ಷತೆ ವಹಿಸಿದ್ದರು.
ಪಂತಡ್ಕ ಮಸೀದಿ ಉಸ್ತುವಾರಿ ಸಮಿತಿ ಅಧ್ಯಕ್ಷ ಹಂಝ ಹಾಜಿ ಪಂತಡ್ಕ, ಉಪಾಧ್ಯಕ್ಷ ಇಬ್ರಾಹಿಂ ಹಾಜಿ ನೆಡ್ಯಾಲು, ಜೊತೆ ಕಾರ್ಯದರ್ಶಿ ಇಂಜಿನಿಯರ್ ಲತೀಫ್ ಕೊಡಾಜೆ, ಅಬ್ದುರ್ರಹ್ಮಾನ್ ಫೈಝಿ ನೆಡ್ಯಾಲು ಉಪಸ್ಥಿತರಿದ್ದರು.
ಪಂತಡ್ಕ ಮದರಸ ಮುಖ್ಯ ಶಿಕ್ಷಕ ಜಾಫರ್ ಸ್ವಾದಿಕ್ ಅರ್ಶದಿ ಸ್ವಾಗತಿಸಿ, ವಂದಿಸಿದರು. ಪಂತಡ್ಕ ಹಾಗೂ ಕೊಡಾಜೆ ಮದ್ರಸ ಉಸ್ತುವಾರಿ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment