ಬಂಟ್ವಾಳ, ಆಗಸ್ಟ್ 12, 2025 (ಕರಾವಳಿ ಟೈಮ್ಸ್) : ಮೂಡಬಿದ್ರೆ ಪೇಟೆಯಲ್ಲಿ ಕಳೆದುಕೊಂಡಿದ್ದ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಗಸ್ಟ್ 8 ರಂದು ಪಡು ಮಾರ್ನಾಡು ಗ್ರಾಮದ ಧರ್ಮಪಾಲ ಬಲ್ಲಾಳ ಅವರ ಪತ್ನಿ ವಿಜಯ ಅವರು ಕುಪ್ಪೆಪದವಿನಲ್ಲಿ ತನ್ನ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ವಾಪಾಸಾಗುವ ವೇಳೆ ಅಪರಾಹ್ನ 2 ಗಂಟೆಗೆ ಮೂಡಬಿದ್ರೆ ಪೇಟೆಯಲ್ಲಿ 2 ಬಳೆ ಮತ್ತು ಚಿನ್ನದ ಸರ ಸಹಿತ ಒಟ್ಟು 9 ಪವನ್ ಚಿನ್ನ ಮತ್ತು ಪರ್ಸ್ ಸಮೇತ ಕಳೆದುಕೊಂಡಿದ್ದರು. ಈ ಬಗ್ಗೆ ಅದೇ ದಿನ ಮೂಡಬಿದರೆ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರನ್ನು ಸ್ವೀಕರಿಸಿ ಪತ್ತೆ ಕಾರ್ಯದಲ್ಲಿ ತೊಡಗಿಸಿಕೊಂಡ ಮೂಡಬಿದ್ರೆ ಪೊಲೀಸ್ ಠಾಣಾ ಪಿಎಸ್ಸೈ ಸಂದೇಶ್ ಪಿ ಜಿ ಅವರ ನೇತೃತ್ವದಲ್ಲಿ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳಾದ ಮಹಮದ್ ಹುಸೇನ್, ಮಹಮದ್ ಇಕ್ಬಾಲ್, ಅಖಿಲ್ ಅಹಮದ್, ನಾಗರಾಜ ಲಮಾಣಿ ಹಾಗೂ ವೆಂಕಟೇಶ್ ಅವರು ಎರಡೇ ದಿನಗಳಲ್ಲಿ ಕಳೆದುಕೊಂಡ ಚಿನ್ನಾಭರಣ ಹಾಗೂ ಪರ್ಸ್ ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ.
0 comments:
Post a Comment