ಕಂಕನಾಡಿ ನಗರ ಪೊಲೀಸ್ ಠಾಣೆ ಹಾಗೂ ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣೆಗಳ ವ್ಯಾಪ್ತಿ ಮರು ವಿಂಗಡಿಸಿ ಸರಕಾರದಿಂದ ಆದೇಶ - Karavali Times ಕಂಕನಾಡಿ ನಗರ ಪೊಲೀಸ್ ಠಾಣೆ ಹಾಗೂ ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣೆಗಳ ವ್ಯಾಪ್ತಿ ಮರು ವಿಂಗಡಿಸಿ ಸರಕಾರದಿಂದ ಆದೇಶ - Karavali Times

728x90

14 August 2025

ಕಂಕನಾಡಿ ನಗರ ಪೊಲೀಸ್ ಠಾಣೆ ಹಾಗೂ ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣೆಗಳ ವ್ಯಾಪ್ತಿ ಮರು ವಿಂಗಡಿಸಿ ಸರಕಾರದಿಂದ ಆದೇಶ

 ಮಂಗಳೂರು, ಆಗಸ್ಟ್ 14, 2025 (ಕರಾವಳಿ ಟೈಮ್ಸ್) : ಸರ್ಕಾರದ ಅಧಿಸೂಚನೆ ಸಂಖ್ಯೆ ಎಚ್ ಡಿ ಎಫ್/ 77/ ಡಿಸಿಒ/ 2020 ದಿನಾಂಕ 31-05-2021 ರಂದು ಮಂಗಳೂರಿನ ನಗರ ಪೊಲೀಸ್ ಕಮಿಷನರೇಟ್ ಹಾಗೂ ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟ ಅಡ್ಯಾರು ಮತ್ತು ಅರ್ಕುಳ ಗ್ರಾಮಗಳನ್ನು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಹಾಗೂ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪದವು ಗ್ರಾಮವನ್ನು ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣಾ ವ್ಯಾಪ್ತಿಗೆ ಮರು ವಿಂಗಡಿಸಿ ಸರಕಾರದ ಅಧಿಸೂಚನೆಯಲ್ಲಿ ಆದೇಶಿಸಿದೆ. 

ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಸಂಬಂಧಿಸಿದಂತೆ ಪದವು ಗ್ರಾಮಕ್ಕೆ ಒಳಡುವ ಕುಲಶೇಖರ, ಸಿಲ್ವರ್ ಗೇಟ್, ಡೈರಿ ಗೇಟ್, ಕುಲಶೇಖರ ಚೌಕಿ, ಪದವಿನಂಗಡಿ, ಗುರುನಗರ, ಮೇರಿಹಿಲ್, ವೆಂಕಟರಮಣ ದೇವಸ್ಥಾನ ರಸ್ತೆ, ಕೊಪ್ಪಳಕಾಡು, ಬಾಂದೊಟ್ಟು, ಯೆಯ್ಯಾಡಿ, ದಂಡಕೇರಿ, ಶಕ್ತಿನಗರ, ನೀತಿನಗರ, ಪೊಲೀಸ್ ಲೇನ್, ಪ್ರೀತಿನಗರ, ಸಂಜಯನಗರ, ಮುಗ್ರೋಡಿ, ಕಾರ್ಮಿಕ ಕಾಲೊನಿ, ಕೆ ಎಚ್ ಬಿ, ನಾಲ್ಯಪದವು, ಗಂಧಕಾಡು, ಯೆಯ್ಯಾಡಿ ಇಂಡಸ್ಟ್ರಿಯಲ್ ಏರಿಯಾ, ರಾಜೀವ ನಗರ, ಮುತ್ತಪ್ಪಗುಡಿ, ಕುಕ್ಕೆಬೆಟ್ಟು, ಮಂಜಡ್ಕ, ದತ್ತನಗರ, ಸಿರ್ಲಪಡ್ಪು ಪ್ರದೇಶಗಳನ್ನು ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣಾ ವ್ಯಾಪ್ತಿಗೆ ಮತ್ತು ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಅಡ್ಯಾರ್ ಮತ್ತು ಅರ್ಕುಳ ಗ್ರಾಮಕ್ಕೆ ಒಳಪಡುವ ಅಡ್ಯಾರ್ ಪದವು, ವಳಚ್ಚಿಲ್, ಸೋಮನಾಥ ಕಟ್ಟೆ, ಅಡ್ಯಾರ್ ಕಟ್ಟೆ, ಅರ್ಕುಳ, ಶ್ರೀನಿವಾಸ ಕಾಲೇಜ್, ಸಹ್ಯಾದ್ರಿ ಕಾಲೇಜ್ ಪ್ರದೇಶಗಳನ್ನು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಮರುವಿಂಗಡಿಸಿ ಸರಕಾರ ಅಧಿಸೂಚನೆ ಹೊರಡಿಸಿದೆ. 

ಆಗಸ್ಟ್ 15 ರಿಂದ ಪದವು ಗ್ರಾಮಕ್ಕೆ ಒಳಪಟ್ಟ ಮೇಲ್ಕಂಡ ಪ್ರದೇಶದ ನಿವಾಸಿಗಳು ತಮ್ಮ ಕ್ರಿಮಿನಲ್ ಪ್ರಕರಣಗಳು, ದೂರು ಅರ್ಜಿಗಳು, ಪಾಸ್ ಪೋರ್ಟ್ ಅರ್ಜಿ ವಿಚಾರಣೆ, ಪಿಸಿಸಿ ವಿಚಾರಣೆ ಹಾಗೂ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಇತರ ವಿಷಯಗಳ ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು. ಹಾಗೂ ಅಡ್ಯಾರ್ ಮತ್ತು ಅರ್ಕುಳ ಗ್ರಾಮಕ್ಕೆ ಒಳಪಡುವ ಮೇಲ್ಕಂಡ ಪ್ರದೇಶಗಳ ನಿವಾಸಿಗಳು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕಾಗಿ ಈ ಮೂಲಕ ಪ್ರಕಟಣೆ ಹೊರಡಿಸಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕಂಕನಾಡಿ ನಗರ ಪೊಲೀಸ್ ಠಾಣೆ ಹಾಗೂ ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣೆಗಳ ವ್ಯಾಪ್ತಿ ಮರು ವಿಂಗಡಿಸಿ ಸರಕಾರದಿಂದ ಆದೇಶ Rating: 5 Reviewed By: karavali Times
Scroll to Top