ಬಂಟ್ವಾಳ, ಆಗಸ್ಟ್ 24, 2025 (ಕರಾವಳಿ ಟೈಮ್ಸ್) : ಕಂಪೆನಿ ಡೀಲರ್ ಶಿಪ್ ನೀಡುವುದಾಗಿ ಬಂಟ್ವಾಳ ವ್ಯಕ್ತಿಯನ್ನು ನಂಬಿಸಿದ ಅಪರಿಚಿತರು ಲಕ್ಷಾಂತರ ರೂಪಾಯಿ ಲಪಟಾಯಿಸಿದ ಬಗ್ಗೆ ಸಿ ಇ ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ವಿಕ್ರಮ್ ಪ್ರಭು ಬಂಟ್ವಾಳ ಎಂಬವರು ಸೆನ್ ಪೊಲೀಸರಿಗೆ ದೂರು ನೀಡಿದ್ದು, ಇವರು ಇಂಜಿನಿಯರಿಂಗ್ ಮುಗಿಸಿ ಪ್ರಸ್ತುತ ಮನೆಯಲ್ಲಿರುವುದಾಗಿದೆ. ಜುಲೈ 4 ರಂದು ಇವರ ಮೊಬೈಲಿಗೆ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ಇಫ್ಕೋ ಕಂಪೆನಿ ರಿಲೇಶನ್ ಶಿಪ್ ಮ್ಯಾನೇಜರ್ ನೀಲೇಶ್ ಮಿಶ್ರಾ ಮಾತನಾಡುವುದಾಗಿ ಹೇಳಿದ್ದು, ಇಫ್ಕೋ ಕಂಪೆನಿ ಡೀಲರ್ ಶಿಪ್ ನೀಡುತ್ತೇವೆ ಎಂದು ಹೇಳಿದಂತೆ ವಿಕ್ರಂ ಅವರು ಒಪ್ಪಿಕೊಂಡಿರುತ್ತಾರೆ. ನಂತರ ವಿಕ್ರಂ ಅವರ ಇ-ಮೇಲ್ ಖಾತೆಗೆ ಕಂಪೆನಿಗೆ ಸಂಬಂಧಪಟ್ಟ ಅಪ್ಲಿಕೇಶನ್ ಫಾರಂ ಕಳುಹಿಸಿದ್ದು ಅದನ್ನು ವಿಕ್ರಂ ಅವರು ಭರ್ತಿ ಮಾಡಿ ಅವರು ತಿಳಿಸಿದಂತೆ ಪಾನ್ ಕಾರ್ಡ್, ಬ್ಯಾಂಕ್ ವಿವರ ಹಾಗೂ ವೈಯಕ್ತಿಕ ದಾಖಲಾತಿಗಳನ್ನು ಕಳುಹಿಸಿದ್ದಾರೆ. ನಂತರ ರಿಜಿಸ್ಟ್ರೇಶನ್ ಶುಲ್ಕ ಎಂದು 35 ಸಾವಿರ ರೂಪಾಯಿ ಹಣ ಕಳುಹಿಸಲು ತಿಳಿಸಿದಂತೆ ವಿಕ್ರಂ ಅವರು ಕಳುಹಿಸಿರುತ್ತಾರೆ. ಬಳಿಕ ಎಗ್ರಿಮೆಂಟ್ ಚಾರ್ಜ್, ಪ್ರೊಡಕ್ಟ್ ಎಮೌಂಟ್, ಶಿಫ್ಟಿಂಗ್ ಎಮೌಂಡ್, ಜಿ ಎಸ್ ಟಿ ಚಾರ್ಜ್, ಟ್ರಾನ್ಸ್ ಪೋರ್ಟೇಶನ್ ಚಾರ್ಜಸ್, ಸಾಫ್ಟ್ ವೇರ್ ಚಾರ್ಜಸ್ ಈ ರೀತಿಯಾಗಿ ವಿವಿಧ ಚಾರ್ಜಸ್ ಗಳಿಗಾಗಿ ಹಣ ಕಳುಹಿಸಲು ತಿಳಿಸಿದ್ದು, ಟ್ರಾನ್ಸ್ ಪೋರ್ಟ್ ಸಮಯ ಏನಾದರೂ ಸಮಸ್ಯೆಯಾದರೆ ಕರೆ ಮಾಡಿ ಎಂದು ಹೇಳಿ ಚಾಲಕರ ನಂಬರ್ ಕೂಡಾ ನೀಡಿರುತ್ತಾರೆ. ಅದರಂತೆ ವಿಕ್ರಂ ವಿವಿಧ ಚಾರ್ಜಸ್‍ಗಳಿಗಾಗಿ ಹಂತ ಹಂತವಾಗಿ ಅಪರಿಚಿತ ವ್ಯಕ್ತಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಒಟ್ಟು 17,60,810/- ರೂಪಾಯಿ ಹಣ ಕಳುಹಿಸಿರುತ್ತಾರೆ.
ಇದಾದ ನಂತರ ಅಪರಿಚಿತ ವ್ಯಕ್ತಿಗಳು ಆಗಸ್ಟ್ 8 ರಂದು ಕರೆ ಮಾಡಿ ನಾವು ಬೆಂಗಳೂರಿಗೆ ಬಂದಿದ್ದು, ಆಗಸ್ಟ್ 10 ರಂದು ನಿಮ್ಮ ಮಡಂತ್ಯಾರ್ ಗೋಡೌನಿಗೆ ಬರುವುದಾಗಿ ತಿಳಿಸಿರುತ್ತಾರೆ. ನಂತರ ಆಗಸ್ಟ್ 11 ರಂದು ವಿಕ್ರಂ ಅವರು ಅಪರಿಚಿತರು ನೀಡಿದ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿದಾಗ ಎಲ್ಲಾ ಮೊಬೈಲ್ ನಂಬ್ರಗಳು ಸ್ವಿಚ್ ಆಫ್ ಆಗಿದ್ದರಿಂದ ವಂಚಕರು ಕೊಟ್ಟಿರುವ ಟೋಲ್ ಫ್ರೀ ನಂಬರಿಗೆ ಕರೆ ಮಾಡಿದಾಗ ನಿಮ್ಮ ಪೆÇ್ರಡಕ್ಟ್ ಬರುತ್ತಿರುವುದರಿಂದ ಅಲ್ಲಿ ನೆಟ್ ವರ್ಕ್ ಸಮಸ್ಯೆ ಇರಬಹುದು ನಾವು ಅವರಿಗೆ ತಿಳಿಸುತ್ತೇವೆ ಎಂದು ಹೇಳಿರುತ್ತಾರೆ. ನಂತರ ಯಾವುದೇ ಕರೆ ಬಂದಿರುವುದಿಲ್ಲ ಹಾಗೂ ವಿಕ್ರಂ ಕರೆ ಮಾಡಿದರೆ ಸ್ವಿಚ್ ಆಫ್ ಎಂದು ಬರುತ್ತಿದ್ದು ಈ ಬಗ್ಗೆ ಸಂಶಯಗೊಂಡು ಬೇರೆಯವರಲ್ಲಿ ವಿಚಾರಿಸಿದಾಗ ಇದೊಂದು ಮೋಸದ ಜಾಲ ಎಂದು ತಿಳಿದು ಬಂದಿದೆ.
ಇಫ್ಕೋ ಕಂಪೆನಿಯ ಡೀಲರ್ ಶಿಪ್ ಹೆಸರಿನಲ್ಲಿ ಅಪರಿಚಿತರು ವಿಕ್ರಂ ಅವರಿಗೆ 17,60,810/- ರೂಪಾಯಿ ಹಣ ಪಡೆದು ವಂಚಿಸಿದ್ದಾರೆ. ಈ ಬಗ್ಗೆ ವಿಕ್ರಂ ಪ್ರಭು ಅವರು ನೀಡಿದ ದೂರಿನಂತೆ ಸಿ ಇ ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 60/2025, ಕಲಂ 66(ಸಿ), 66(ಡಿ) ಐಟಿ ಆಕ್ಟ್ ಹಾಗೂ 318(4), 319(2) ಬಿ ಎನ್ ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment